ಕೈಕಂಬ: ಗುರುಪುರ ಮಾಣಿಬೆಟ್ಟು ಶ್ರೀ ಕೊರ‍್ದಬ್ಬು ಪರಿವಾರ ದೈವಸ್ಥಾನದ ಪಕ್ಕದಲ್ಲಿ ಜೂ. ೧೭ರಂದು ನಡೆಸಲಾದ ಉತ್ಖನನದ ವೇಳೆ ಧೂಮಾವತಿ ದೈವದ ಮೂರ್ತಿ ಸಹಿತ ಹಲವು ಪರಿಕರಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದೈವದ ಆಣತಿಯಂತೆ ಮೂಲ ಸಾನಿಧ್ಯದಲ್ಲಿ ಮತ್ತೊಂದು ಬಾರಿ ಉತ್ಖನನಕ್ಕೆ ನಿರ್ಧರಿಸಲಾಯಿತು.gur-june-18-kordabbu-4

ಶುಕ್ರವಾರ ಬೆಳಿಗ್ಗೆ ಮಾಣಿಬೆಟ್ಟು ಶ್ರೀ ಕೊರ‍್ದಬ್ಬು ಪರಿವಾರ ದೈವಸ್ಥಾನದಲ್ಲಿ ನಡೆದ ಶ್ರೀ ಕೊರ‍್ದಬ್ಬು ಮತ್ತು ಪಂಜುರ್ಲಿ ದೈವಗಳ ದರ್ಶನದ ವೇಳೆ, ಉತ್ಖನನ ನಡೆಸಲಾದ ಜಾಗದಲ್ಲಿ ಇನ್ನೂ ಕೆಲವು ಅಮೂಲ್ಯ ಸೊತ್ತುಗಳಿವೆ. ಮೂರು ದಿನ ಬಿಟ್ಟು ಮತ್ತೊಂದು ಬಾರಿ ಉತ್ಖನನ ಮಾಡಿ ಅವುಗಳನ್ನು ಹೊರತೆಗೆಯಲು ದೈವಗಳು ಅಭಯ ನೀಡಿತು.

ದರ್ಶನದ ವೇಳೆ ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟು, ಶ್ರೀನಿವಾಸ ಆಳ್ವ ಕಾರಮೊಗರುಗುತ್ತು, ರವಿ ಶೆಟ್ಟಿ ಬೆಳ್ಳೂರುಗುತ್ತು, ಗಂಗಾಧರ ಸಪಲಿಗ ಮತ್ತು ಕುಟುಂಬಿಕರು, ಜಿ ಕೆ ಕಿಟ್ಟಣ್ಣ ರೈ ಕಾರಮೊಗರುಗುತ್ತು, ಸಾಲ್ಯಾನ್ ಕುಟುಂಬಿಕರು, ದೀಪಕ್ ಬಂಗೇರ ಬರ್ಕೆ, ಗುರುಪುರ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ ಮತ್ತು ನಳಿನಿ ಶೆಟ್ಟಿ, ಜಗದೀಶ ಶೆಟ್ಟಿ, ಪ್ರಭಾಕರ ಶೆಟ್ಟಿ, ಹರೀಶ್ ಬರ್ಕೆ, ಪ್ರಜ್ವಲ್ ಬರ್ಕೆ, ದೈವದ ಪರಿಚಾರಕರು, ಭಕ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *