ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವನ್ನು ಶಾಸಕ ಉಮಾನಾಥ್ ಕೋಟ್ಯಾನ್ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ರೂ.50 ಲಕ್ಷ ಅನುದಾನದಲ್ಲಿ ಕಡದಬೆಟ್ಟು ಪ್ರದೇಶದಲ್ಲಿ ರಸ್ತೆ, ಚರಂಡಿ ನಿರ್ಮಣ, ಲೋಕೋಪಯೋಗಿ ಇಲಾಖೆ ರೂ.20 ಲಕ್ಷ ಅನುದಾನದಲ್ಲಿ ಒಂಟಿಕಟ್ಟೆ-ಕಡ್ಲಗುಡ್ಡ ಸೇರಿ ಒಟ್ಟು 70 ಲಕ್ಷ ರೂ. ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗಿದೆ.
ಗಾಂಧಿನಗರ ಅಮರನಾಥ ಶೆಟ್ಟಿ ಮನೆ ಬಳಿ ಪರಿಶಿಷ್ಟ ಜಾತಿ ಕಾಲನಿ ರಸ್ತೆಗೆ ಕರ್ನಾಟಕ ಲೋಕೋಪಯೋಗಿ ಹಾಗೂ ಪುರಸಭೆ ರೂ.18.44 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾದ ರಸ್ತೆ, 15ನೇ ಹಣಕಾಸು ಯೋಜನೆ ಪುರಸಭೆಯ ರೂ. 6.40 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾದ ಪಿಲಿಪಂಜರ-ಧವಳ ನಗರ ರಸ್ತೆ, ರೂ.5 ಲಕ್ಷ ಪುರಸಭೆ ನಿಧಿಯಿಂದ ಅಭಿವೃದ್ಧಿ ಪಡಿಸಲಾದ ಕಲ್ಲಬೆಟ್ಟು ಕೋಂಕೆ-ಕಲ್ಲಬೆಟ್ಟು ಶಾಲೆ ರಸ್ತೆ, ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ 10.85 ಲಕ್ಷ ಬರೂಪಾಯಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಜ್ಯೋತಿನಗರ ಹಿಂದೂ ರುಧ್ರಭೂಮಿ ರಸ್ತೆಯನ್ನು ಲೋಕಾರ್ಪಣೆಗೊಳಿಸಿದ್ದೇನೆ ಎಂದರು.
ಮೂಡುಬಿದಿರೆ ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಧರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮೂಡಾ ಅಧ್ಯಕ್ಷರಾದ ಮೇಘನಾಥ್ ಶೆಟ್ಟಿ, ಮುಖ್ಯಾಧಿಕಾರಿ ಇಂದು ಎಂ., ಪಿಡಬ್ಲುಡಿ ಇಂಜಿನಿಯರ್ ರಾಘವೇಂದ್ರ, ಪುರಸಭೆ ಇಂಜಿಯರ್ ಪದ್ಮನಾಭ ಕಟೀಲ್, ಪುರಸಭಾ ಸದಸ್ಯರಾದ ಉಪಸ್ಥಿತರಿದ್ದರು.
