ಮೂಡುಬಿದಿರೆ: 10 ಮಂದಿ ಸಮಾನಮನಸ್ಕರು ಸೇರಿ ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ರಚಿಸಿದ್ದು, ಮೂಡುಬಿದಿರೆ ಪರಿಸರದ ಬಡ ಜನರಿಗೆ ಅನುಕೂಲವಾಗುವಂತೆ ಉಚಿತ ಅಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಿದೆ ಎಂದು ಸೌಹಾರ್ದ ಚಾರಿಟೇಬಲ್ ಅಧ್ಯಕ್ಷ ಅಬುಲ್ ಆಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.30fa16db-d77f-4a16-b138-5d1167aeb101

ಈ ಉಚಿತ ಅಂಬ್ಯುಲೆನ್ಸ್ ಸೇವೆಗಾಗಿ 8.5 ಲಕ್ಷ ರೂ. ವೆಚ್ಚದ ಹೊಸ ಇಕೊ ವಾಹನವನ್ನು ಖರೀದಿಸಿದ್ದು, ಮೊದಲ ತಿಂಗಳಲ್ಲಿ ಕೊರೊನಾ ರೋಗಿಗಳಿಗೆ ಆದ್ಯತೆ ನೀಡಲಾಗುವುದು. ಬಿಪಿಎಲ್ ಕಾರ್ಡ್ದಾರರಿಗೆ ಈ ಸೇವೆಯು ಉಚಿತವಾಗಿದೆ. ಅಂಬ್ಯುಲೆನ್ಸ್ನಲ್ಲಿ ಅಕ್ಸಿಜನ್, ಪ್ರಥಮ ಚಿಕಿತ್ಸೆ ಸಹಿತ ಎಲ್ಲ ಸವಲಭ್ಯಗಳನ್ನು ಒಳಗೊಂಡಿದೆ.

ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಈ ವಾಹನವನ್ನು ಬಳಸಬಹುದು. ಬಿಪಿಎಲ್ ಹೊರತಾದವರಿಗೆ ಕನಿಷ್ಠ ಶುಲ್ಕವನ್ನು ವಿಧಿಸಲಾಗುವುದು.ಜೂನ್ 7ರಂದು ಬೆಳಗ್ಗೆ 10 ಗಂಟೆಗೆ ಕನ್ನಡ ಭವನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅಂಬ್ಯುಲೆನ್ಸ್ ಸೇವೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮರ್, ತಹಸೀಲ್ದಾರ್ ಪುಟ್ಟರಾಜು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಟ್ರಸ್ಟ್ ಕಳೆದ ವರ್ಷವು ಕೊರನಾ ಸಂದರ್ಭದಲ್ಲಿ ಸ್ಯಾನಿಟೈಸರ್, ಉಚಿತ ಆಹಾರ ಸೇವೆ, ಕುಡಿಯುವ ನೀರು, ಆಹಾರ ಕಿಟ್‌ಗಳನ್ನು ಪೂರೈಸಿದೆ ಹಾಗೂ ಇತರ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಮೂಡುಬಿದಿರೆ ಜನರ ಬೇಡಿಕೆಯಾದ ಡಯಾಲಿಸಿಸ್ ಯಂತ್ರವನ್ನು ಅಳವಡಿಸುವ ಯೋಜನೆಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಮಹಮ್ಮದ್ ಶರೀಫ್, ಸದಸ್ಯರಾದ ಸಿ.ಎಚ್ ಗಫೂರ್, ಹಮೀದ್, ಮಕ್ಬುಲ್ ಹುಸೇನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *