ಪೊಳಲಿ: ಕೋವಿಡ್ ಮಹಾಮಾರಿಯ 2ನೇ ಅಲೆ ಭಾರತ ಒಳಗೊಂಡಂತೆ ಜಗತ್ತಿನಾದ್ಯಂತ ಸಾಮಾನ್ಯ ಜನಜೀವನದ ಮೇಲೆ ಘೋರ ಪರಿಣಾಮ ಬೀರಿದೆ. ದೇಶದ ಆರ್ಥಿಕತೆ, ಶಿಕ್ಷಣ ವ್ಯವಸ್ಥೆ, ಉದ್ಯಮ ಕ್ಷೇತ್ರ ಹೀಗೆ ಎಲ್ಲ ಕ್ಷೇತ್ರಗಳ ಮೇಲೆ ಪ್ರತೀಕೂಲ ಪರಿಣಾಮ ಬೀರಿದೆ.
ಇಂತಹ ಸಮಯದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ವತಿಯಿಂದ ಸ್ಥಳೀಯವಾಗಿ ಎಂಟು ಗ್ರಾಮಗಳ ಸುಮಾರು 300 ಬಡ ಕುಟುಂಬಗಳಿಗೆ ದಿನಸಿ ಕಿಟ್ ನೀಡಲು ನಿರ್ಧರಿಸಿದೆ ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಆಶ್ರಮದ ವತಿಯಿಂದ ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಮುಂಜೆ, ಕೊಡ್ಮಾನ್, ನೆತ್ತರುಕೆರೆ, ಅಬ್ಬೆಟ್ಟು ಮತ್ತು ಅಡ್ಡೂರು ಗ್ರಾಮಗಳಲ್ಲಿ ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುವ 300 ಕುಟುಂಬಗಳಿಗೆ ಒಟ್ಟು 16 ದಿನಸಿ ಐಟಂಗಳು ಒಳಗೊಂಡ 1,100 ರೂಪಾಯಿ ಮೊತ್ತದ ಕಿಟ್ ಒದಗಿಸಲು ತೀರ್ಮಾನಿಸಲಾಗಿದೆ.
ಆಶ್ರಮದ ವತಿಯಿಂದ ಕೈಗೊಳ್ಳುವ ಈ ಸಮಾಜಮುಖಿ ಸೇವೆಯಲ್ಲಿ ಸಾರ್ವಜನಿಕರು, ಠಾಕೂರ್ ಅನುಯಾಯಿಗಳು, ಸ್ವಯಂ ಪ್ರೇರಣೆಯಿಂದ ದಾನ ಮಾಡಲು ಇಚ್ಛಿಸುವ ಆಶ್ರಮದ ಹಿತೈಷಿಗಳು ಕೈಜೋಡಿಸಬಹುದು. ಬಡಜನರ ಮೇಲೆ ಅನುಕಂಪವಿರುವ ಯಾರು ಬೇಕಾದರೂ ದಾನ ಮಾಡಬಹುದು, ಇದರಲ್ಲಿ ಯಾವುದೇ ನಿರ್ಬಂಧವಿಲ್ಲ.
ಈ ನಿಟ್ಟಿನಲ್ಲಿ ಆಶ್ರಮದ ಮಾಸಿಕ ದಾನಿಗಳು, ಪೋಷಕರಿಗೆ ಅನಗತ್ಯವಾಗಿ ಹೆಚ್ಚುವರಿ ಹೊರೆಗೆ ಇಚ್ಚಿಸಿಲ್ಲ ಎಂದವರು ವಿವರಿಸಿದ್ದಾರೆ. “ಉಳ್ಳವರ ಕಿಂಚಿತ್ ದೇಣಿಗೆ ಹಸಿದ ಕುಟುಂಬಗಳ ನಗುವಿಗೆ ಕಾರಣವಾಗಬಹುದು” ಎಂದು ಸ್ವಾಮೀಜಿಯವರು ಹೇಳಿದರು. ವಿದೇಶಿ ದಾನಿಗಳು ಬದಲಾದ ಎಫ್ಸಿಆರ್ಎ ಖಾತೆ ಸಂಪರ್ಕಿಸಬಹುದು.
ಸಂಸ್ಥೆಯ ಹೆಸರು : ರಾಮಕೃಷ್ಣ ತಪೋವನ, ಖಾತೆ ಸಂಖ್ಯೆ 40091778699(ಎಫ್ಸಿಆರ್ಎ ಉಳಿತಾಯ ಖಾತೆ), ಐಎಫ್ಎಸ್ಸಿ : ಎಸ್ಬಿಐಎನ್ 0000691, ಎಸ್ಡಬ್ಲ್ಯೂಐಎಫ್ಟಿ : ಎಸ್ಬಿಐಎನ್ಐಎನ್ಬಿಬಿ104, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನ್ಯೂಡೆಲ್ಲಿ, ಮೈನ್ ಬ್ರಾಂಚ್, ಎಫ್ಸಿಆರ್ಎ ಶೆಲ್, 4ನೇ ಮಹಡಿ, 11ನೇ ಸನ್ಸಾದ ಮಾರ್ಗ್, ನ್ಯೂಡೆಲ್ಲಿ-110001. ಹೆಚ್ಚಿನ ಮಾಹಿತಿಗಾಗಿ ರಾಮಕೃಷ್ಣ ತಪೋವನ, ಪೊಳಲಿ ಅಂಚೆ, ಕರಿಯಂಗಳ ಗ್ರಾಮ, ಬಂಟ್ವಾಳ ತಾಲೂಕು, ದ.ಕ-574219, ದೂರವಾಣಿ 0824/2266655, 2016455 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
