ಕೈಕಂಬ : ಗುರುವಾರ ಮಧ್ಯರಾತ್ರಿ ಸುರಿದ ಧಾರಾಕಾರ ಮಳೆ ವೇಳೆ ಕರಿಯಂಗಳ ಗ್ರಾಮದ ವರಕೋಡಿಯ ಹರೀಶ್ ಟೈಲರ್ ಎಂಬವರ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿ ಸಂಭವಿಸಿದೆ.
ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಮನೆಯ ಸಾಕುನಾಯಿ ಸಿಡಿಲಿನಘಾತಕ್ಕೆ ಅಸುನೀಗಿದೆ. ಮನೆಯ ವಿದ್ಯುತ್ ಸಂಪರ್ಕ ಸೋಲಾರ್ ಸಂಪೂರ್ಣ ಸುಟ್ಟು ಹೋಗಿದೆ. ಕರಿಯಂಗಳ ಗ್ರಾಮ ಪಂಚಾಯತ್ ಸಿಬ್ಬಂದಿ ರೂಪೇಶ್ , ತಾ.ಪಂ. ಸದಸ್ಯ ಯಶವಂತ ಪೂಜಾರಿ , ಸುಕೇಶ್ ಚೌಟ ಮನೆಗೆ ಭೇಟಿ ನೀಡಿದರು. ಸುಮಾರು 40,000 ನಷ್ಟ ಸಂಭವಿಸಿದೆ ಎಂದು ಹರೀಶ್ ಅವರಲ್ಲಿ ಹೇಳಿದರು.
