ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿಯಲ್ಲಿ 60 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಕೊರೊನಾ ಪ್ರತಿರೋಧಕ ಲಸಿಕೆಯನ್ನು ಪಡೆದಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಪಡೆ ಸಭೆಯಲ್ಲಿಯೇ ಶೇ.90ರಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದರು. ಇದೀಗ ಉಳಿದವರದ್ದೂ ಆಗಿದ್ದು, ಕೆಲವರದ್ದು ಎರಡೂ ಹಂತಗಳೂ ಆಗಿವೆ.

ಇದರೊಂದಿಗೆ ರಾಯಿ ಗ್ರಾಪಂನ ಹಿರಿಯರು ಉಳಿದ ಗ್ರಾಮ, ಪಟ್ಟಣಗಳಿಗೆ ಮಾದರಿಯಾಗಿದ್ದಾರೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 60 ವರ್ಷಕ್ಕೆ ಮೇಲ್ಪಟ್ಟ 275 ಮಂದಿ ಇದ್ದಾರೆ. ಸುಮಾರು 4,200ರಷ್ಟು ಜನಸಂಖ್ಯೆ ಇರುವ ರಾಯಿಯಲ್ಲಿ ಇವರೆಲ್ಲರೂ ಲಸಿಕೆ ಪಡೆದುಕೊಂಡಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ರಾಯಿ ಗ್ರಾಪಂ ವ್ಯಾಪ್ತಿಯ ಒಬ್ಬರು ಸಾವನ್ನಪ್ಪಿದ್ದಾರೆ. ಈಗ 9 ಸಕ್ರಿಯ ಪ್ರಕರಣಗಳು ಇವೆ ಎಂದು ಪಿಡಿಒ ಮಧು ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *