ಬಂಟ್ವಾಳ:ಇಲ್ಲಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಸಹಿತ ಮತ್ತು ರಾಯಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ರಾಯಿ ಮತ್ತು ಅರಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ದಿನಸಿ ಸಾಮಾಗ್ರಿ ಕಿಟ್ ಶುಕ್ರವಾರ ವಿತರಿಸಲಾಯಿತು.

ಇದೇ ವೇಳೆ ಮಾಸ್ಕ್, ಸ್ಯಾನಿಟೈಸರ್ ಮತ್ತಿತರ ಸಾಮಾಗ್ರಿ ವಿತರಿಸಿ ಕೋವಿಡ್ ವೈರಸ್ ಹರಡದಂತೆ ನಾಗರಿಕರಲ್ಲಿ ಜನಜಾಗೃತಿ ಮೂಡಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾ ಆನಂದ ಹೇಳಿದರು. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ರೋಟರಿ ಕ್ಲಬ್ ಅಧ್ಯಕ್ಷ ಮೈಕಲ್ ಡಿಕೋಸ್ತ ಶುಭ ಹಾರೈಸಿದರು.
ಕ್ಲಬ್ಬಿನ ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ, ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಚಂದ್ರಶೇಖರ್ ಗೌಡ, ಪದ್ಮನಾಭ ಗೌಡ, ಪ್ರಮುಖರಾದ ಹರೀಶ್ ಆಚಾರ್ಯ ರಾಯಿ, sಸಂತೋಷ್ ಕುಮಾರ್ ಬೆಟ್ಟು, ಮೋಹನ್ ಜಿ.ಮೂಲ್ಯ, ಸುನಿಲ್ ಸಿಕ್ವೇರಾ, ದಿನೇಶ್ ಸುವರ್ಣ ರಾಯಿ , ಭೋಜ ಮೂಲ್ಯ, ರವೀಂದ್ರ ಪೂಜಾರಿ ಬದನಡಿ ಮತ್ತಿತರರು ಇದ್ದರು. ಸಭೆಯಲ್ಲಿ ಅನಾರೋಗ್ಯಪೀಡಿತ ವಿಶ್ವನಾಥ ಪೂಜಾರಿ ರಾಯಿ ಇವರಿಗೆ ದಿನಸಿ ಸಾಮಾಗ್ರಿ ಕಿಟ್ ವಿತರಿಸಿದರು. ಪಿಡಿಒ ಮಧು ಸ್ವಾಗತಿಸಿ, ವಂದಿಸಿದರು.
