ಮೂಡುಬಿದಿರೆ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಪುಣ್ಯ ತಿಥಿ ಗೌರವ ನಮನ ಕಾರ್ಯಕ್ರಮ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ 1500 ಐಸೋಲೇಷನ್ ಕಿಟ್ ಅನ್ನು ಹಸ್ತಾಂತರಿಸಲಾಯಿತು.
ಮಾಜಿ ಸಚಿವ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಅವರು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ ಅವರಿಗೆ ಹಸ್ತಾಂತರಿಸಲಾಯಿತು.
ಕೆಪಿಸಿಸಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೊ , ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ , ಯುವ ನಾಯಕ ಚಂದ್ರಹಾಸ್ ಸನಿಲ್, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ , ಪಡುಮಾರ್ನಾಡ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಭಿನಂದನ್ ಬಲ್ಲಾಳ್, ಸಂತೋಷ್ ಶೆಟ್ಟಿ, ವಿವಿಧ ಪಂಚಾಯಿತಿಗಳ ಸದಸ್ಯರಾದ ಮುರಳೀಧರ ಕೋಟ್ಯಾನ್ , ಜಯಕುಮಾರ್, ಪುರುಷೋತ್ತಮ್ ನಾಯಕ್, ಅರುಣ್ ಕುಮಾರ್ ಶೆಟ್ಟಿ, ಕಿರಣ್ ಕುಮಾರ್ ಬೆಳುವಾಯಿ, ಯುವ ಇಂಟಕ್ ಅಧ್ಯಕ್ಷ ಸುಚಿನ್ ಮಡಿವಾಳ, ಮಹಮ್ಮದ್ ಅಸ್ಲಾಂ, ವಾಸುದೇವ ನಾಯಕ್ ಉಪಸ್ಥಿತರಿದ್ದರು.
