ಮೂಡುಬಿದಿರೆ: ತಾಲೂಕಿನ ಕಲ್ಲಮುಂಡ್ಕೂರು, ಶಿರ್ತಾಡಿ, ನೆಲ್ಲಿಕಾರು, ಬೆಳುವಾಯಿ ಹಾಗೂ ಪಾಲಡ್ಕ ಆರೋಗ್ಯ ಕೇಂದ್ರಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಬುಧವಾರ ಕೋವಿಡ್ ಹಾಗೂ ಆರೋಗ್ಯ ಸೇವೆಯ ಬಗ್ಗೆ ಪರಿಶೀಲಿಸಿದರು.ಕೋವಿಡ್ ಪಾಸಿಟಿವ್, ಲಸಿಕೆ ಬಗ್ಗೆ ಆಯಾ ಪ್ರಾಥಮಿಕ ಕೇಂದ್ರಗಳ ಆರೊಗ್ಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಗ್ಯ ಸೇವೆಗಳಗೋಸ್ಕರ ತುರ್ತು ವಾಹನಗಳು ಬೇಕಾದಲ್ಲಿ ಗ್ರಾಮ ಪಂಚಾಯಿತಿಯಿಂದ ವಾಹನ ವ್ಯವಸ್ಥೆ ಮಾಡಿಸಿಕೊಳ್ಳಲು ಅವಕಾಶವಿದೆ. ಈ ಕುರಿತಾದ ಆದೇಶ ಹೊರಟಿದ್ದು ತಕ್ಷಣವೇ ಅದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆರೋಗ್ಯ ಕೇಂದ್ರಗಳಿಗೆ ತಲುಪಲಿದೆ. ತಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಸಿಬಂದಿ ಕೊರತೆ ಹಾಗೂ ಆರೋಗ್ಯ ಸೇವಾ ವಿಭಾಗಗಳ ಸಿಬಂದಿಗೆ ಸಂಬಳ ಬಿಡುಗಡೆ ವಿಳಂಬವಾಗುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಸೀಬಾ ಮಾಹಿತಿ ನೀಡಿ, ಇದುವರೆಗೆ 1511 ಮಂದಿ ಲಸಿಕೆ ಪಡೆದಿದ್ದಾರೆ, 382 ಮಂದಿಗೆ ದ್ವಿತೀಯ ಡೋಸ್ ನೀಡಲಾಗಿದೆ. 75 ಆ್ಯಕ್ಟಿವ್ ಪ್ರಕರಣಗಳಿದ್ದು 8 ಮಂದಿ ಆಸ್ಪತ್ರೆಗಳಲ್ಲಿ , ಉಳಿದವರು ಹೋಂ ಐಸೋಲೇಶನಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಪುರುಷ ಸಿಬ್ಬಂದಿಗಳಿಲ್ಲ, ಡಾಟಾ ಎಂಟ್ರಿ ಆಪರೇಟರ್‍ಗಳ ಅವಶ್ಯಕತೆಯಿದೆ ಎಂದು ಶಾಸಕರ ಗಮನಕ್ಕೆ ತಂದರು. ನೆಲ್ಲಿಕಾರು ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ 774 ಮಂದಿ ಮೊದಲ, 220 ಮಂದಿ ದ್ವಿತೀಯ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದು 24 ಪಾಸಿಟಿವ್ ಪ್ರಕರಣಗಳ ಪೈಕಿ 17 ಮಂದಿ ಹೋಂ ಐಸೋಲೇಶನ್‍ನಲ್ಲಿದ್ದಾರೆ, ಏಳು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ.ಭರತ್ ಎಂ.ಅವರು ಶಾಸಕರಿಗೆ ಮಾಹಿತಿ ನೀಡಿದರು.
ಳ್ಳ ಬೆಳುವಾಯಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈವರೆಗೆ 1560 ಮಂದಿಗೆ ಕೋವಿಡ್ ಮೊದಲ ಡೋಸ್ ನೀಡಲಾಗಿದ್ದು ಇವರಲ್ಲಿ 529 ಮಂದಿಗೆ ದ್ವಿತೀಯ ಡೋಸ್ ನೀಡಲು ಸಾದ್ಯವಾಗಿದೆ ಎಂದು ಶಾಸಕರಿಗೆ ಪ್ರಥಮ ದರ್ಜೆ ಸಹಾಯಕ ಸುರೇಶ್ ಜೈನ್ ಮಾಹಿತಿ ನೀಡಿದರು. ಪಾಲಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದುವರೆಗೆ 1500 ಮಂದಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದು ಇವರಲ್ಲಿ 482 ಮಂದಿಗೆ ಮಾತ್ರ ದ್ವಿತೀಯ ಡೋಸ್ ನೀಡಲು ಸಾಧ್ಯವಾಗಿದೆ. ಒಟ್ಟು 27 ಪಾಸಿಟಿವ್ ಪ್ರಕರಣಗಳಿವೆ ಎಂದು ವೈಧ್ಯಾಧಿಕಾರಿ ಡಾ.ಮನಿಷಾ ಮಾಹಿತಿ ನೀಡಿದರು.
ಕಲ್ಲಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾ„ಕಾರಿ ಡಾ.ತ್ರಿವೇಣಿ ಆಚಾರ್ಯ, ಶಿರ್ತಾಡಿ ಗ್ರಾ.ಪಂ. ಪಿಡಿಓ ವೆಂಕಟರಮಣ, ಅಧ್ಯಕ್ಷ ಸಂತೋಷ್ ಕೋಟ್ಯಾನ್, ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷ ಕೇಶವ ಪೂಜಾರಿ, ಉಪಾಧ್ಯಕ್ಷೆ ಕಲ್ಯಾಣಿ, ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ,ಸದಸ್ಯರು, ನೆಲ್ಲಿಕಾರು ಪಂಚಾಯಿತಿ ಅಧ್ಯಕ್ಷೆ ಸುಶೀಲಾ, ಬೆಳುವಾಯಿ ಗ್ರಾಪಂ ಅಧ್ಯಕ್ಷೆ ಸುಶೀಲಾ, ಉಪಾಧ್ಯಕ್ಷರವೀಂದ್ರ ಪೂಜಾರಿ, ಮಾಜಿ ಅಧ್ಯಕ್ಷರಾದ ಭಾಸ್ಕರ ಆಚಾರ್ಯ, ಸೋಮನಾಥ ಕೋಟ್ಯಾನ್, ಪಾಲಡ್ಕ ಪಂಚಾಯಿತಿ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಪಿಡಿಓ ರಕ್ಷಿತಾ, ಪುತ್ತಿಗೆ ಪಂ. ಅಧ್ಯಕ್ಷ ಪ್ರವೀಣ್ ಶೆಟ್ಟಿ, ಆಶಾ ಕಾರ್ಯಕರ್ತರ ಜೊತೆ ಶಾಸಕರು ಸಮಾಲೋಚನೆ ನಡೆಸಿದರು.
ಜಿಪಂ ಸದಸ್ಯ ಸುಚರಿತ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಮುಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಶಿರ್ತಾಡಿ, ದಿವ್ಯವರ್ಮ ಬಲ್ಲಾಳ್ ಉಪಸ್ಥಿತರಿದ್ದರು.
