Published On: Thu, May 6th, 2021

ಕುಂಜೂರು ಗಣೇಶ ಆಚಾರ್ಯ ನಿಧನ

ಮೂಡುಬಿದಿರೆ: ಪ್ರಾಂತ್ಯದ ಸರ್ಕಾರಿ ಪ್ರೌಢಶಾಲಾ ಕನ್ನಡ ಅಧ್ಯಾಪಕ, ಯಕ್ಷಗಾನ ಪ್ರಸಂಗಕರ್ತೃ, ಬಹುಮುಖ ಪ್ರತಿಭೆಯ ಕಲಾವಿದ ಕುಂಜೂರು ಗಣೇಶ ಆಚಾರ್ಯ (56) ಬುಧವಾರ ನಿಧನ ಹೊಂದಿದರು. ಪತ್ನಿ, ಪುತ್ರನನ್ನು ಅಗಲಿದ್ದಾರೆ.

a18aa233-248b-4da0-a46f-2c46b2f66bd2
ಮೂಲತ: ಉಡುಪಿ ಜಿಲ್ಲೆಯ ಪಣಿಯೂರು ಹತ್ತಿರ ಕುಂಜೂರಿನವರಾದ ಗಣೇಶ್ ಅವರು ಬೆಳ್ತಂಗಡಿ ಬುಳೇರಿ ಪ್ರಾಥಮಿಕ ಶಾಲೆ, ಪಡ್ಡಂದಡ, ಪೂಂಜಾಲಕಟ್ಟೆ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಮೂಡುಬಿದಿರೆ ಪ್ರಾಂತ್ಯ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವಾನಿರತರಾಗಿದ್ದರು. ಪ್ರೇಮ ಪಲ್ಲವಿ, ಕನಕ ಕಸ್ತೂರಿ, ಸೌಧರ್ಮ ವಿಜಯ, ಗಾಯತ್ರೀ ಮಂತ್ರೋಪಖ್ಯಾನ ಸೇರಿದಂತೆ ಸಂಜ್ಞಾ ಸೂರ್ಯ, ರೌಂಜಕಾಸುರ ವಧೆ, ಮೌನೇಶ್ವರ ಮಹಾತ್ಮೆ, ಶ್ರೀ ಕಾತ್ಯಾಯಿನಿ ಮಹಾತ್ಮೆ ಮೊದಲಾದ ಮೂವತ್ತೈದಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳನ್ನು ಬರೆದು ಪ್ರಕಟಿಸಿರುವ ಅವರು ವಿಶ್ವ ಬ್ರಾಹ್ಮಣ ಪರಂಪರೆಯ ಬಗ್ಗೆ ಆಳವಾಗಿ ಅಧ್ಯಯನ ನಡೆಸಿ, ಈ ಪರಂಪರೆಯ ಅನೇಕ ಗುರುಗಳ ಜೀವನ ಚರಿತ್ರೆಯನ್ನು ಭಾಮಿನೀ ಷಟ್ಪದಿಯಲ್ಲಿ , ಗದ್ಯರೂಪದಲ್ಲಿ ವಿರಚಿಸಿದವರು.

ಸಚಿತ್ರ ತಾಳಮದ್ದಲೆ ಎಂಬ ಹೊಸ ಪ್ರಕಾರವನ್ನೇ ರೂಪಿಸಿದ ಅವರು ತಾವೇ ಬರೆದ ಅಮರಶಿಲ್ಪಿ ಜಕಣಾಚಾರಿ ಯಕ್ಷಗಾನ ಪ್ರಸಂಗವನ್ನು ಹಲವೆಡೆ ಪ್ರಸ್ತುತಪಡಿಸಿದ್ದರು. `ವಿಶ್ವಕರ್ಮ ಸಂಸ್ಕøತಿ ಪ್ರಸಾರ ಪ್ರತಿಷ್ಠಾನ ‘ ಹುಟ್ಟುಹಾಕಿ `ಮನೆ ಮನೆಗೆ ವಿಶ್ವಕರ್ಮ’ ಹೆಸರಿನ ತಾಳಮದ್ದಳೆ , ಕಾವ್ಯವಾಚನ ಕಾರ್ಯಕ್ರಮಗಳನ್ನು 250ಕ್ಕೂ ಅಧಿಕ ಮನೆಗಳಲ್ಲಿ ನಡೆಸಿಕೊಟ್ಟವರು. `ಕಿಟ್ಟನ ದೋಣಿ’ ಮೊದಲಾದ ಶಿಶುಗೀತೆ ಮತ್ತಿತರ ಮಕ್ಕಳ ಸಾಹಿತ್ಯ ಕೃತಿಗಳನ್ನೂ ಅವರು ಪ್ರಕಟಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter