ಮುಂಬಯಿ : ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ ಸ್ಥಾಪಿತ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ ಎ.೨೧ ರಂದು ಬುಧವಾರ ೨೫ನೇ ವಾರ್ಷಿಕ ರಾಮನವಮಿಯನ್ನು ತೀರಾ ಸರಳವಾಗಿ ಸಾಂಪ್ರದಾಯಿಕ ಧಾರ್ಮಿಕ ವಿಧಿಗಳೊಂದಿಗೆ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಜಿ ಮತ್ತು ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮಿಜಿಗಳ ಮಾರ್ಗದರ್ಶನ ಹಾಗೂ ಅನುಗ್ರಹದಿಂದ ಆಚರಿಸಲಾಯಿತು.
ಬೆಳಿಗ್ಗೆ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ರಾತ್ರಿ ಪೂಜೆ ನಡೆಸಲ್ಪಟ್ಟಿತು. ಮಠದಲ್ಲಿ ಪ್ರತಿಷ್ಠಾಪಿತ ಶ್ರೀದೇವರಿಗೆ ಪೂಜೆ ನೆರವೇರಿಸಿ ಸಾಂಪ್ರದಾಯಿಕವಾಗಿ ರಾಮನವಮಿ ಆಚರಿಸಲಾಯಿತು.
ಮಠದ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಪೂಜಾಧಿಗಳನ್ನು ನೆರವೇರಿಸಿದರು. ವಿದ್ವಾನ ಜನಾರ್ದನ ಅಡಿಗ, ರಾಘವೇಂದ್ರ ಉಡುಪ, ಶಂಕರ ಕಲ್ಯಣಿತ್ತಾಯ ಪೂಜೆ ನಡೆಸಿ ಬೆರಳೆಣಿಕೆಯಷ್ಟೇ ನೆರೆದ ಭಕ್ತರಿಗೆ ಹರಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ (ವಳಕಾಡು-ಉಡುಪಿ) ಉಪಸ್ಥಿತರಿದ್ದು ಶ್ರೀ ರಾಮ ದೇವರಿಗೆ ಪೂಜೆ ಸಲ್ಲಿಸಿದರು.
