Published On: Sun, Apr 18th, 2021

ಜಿಲ್ಲಾ ಕಂಬಳ ಸಮಿತಿ ಮಹಾಸಭೆ ಕಂಬಳ ನಿಯಮ ರೂಪಿಸಲು ತಜ್ಞರ ಸಮಿತಿ ರಚನೆ

ಮೂಡುಬಿದಿರೆ: ಕಂಬಳದಲ್ಲಿ ಶಿಸ್ತಿನ ಚೌಕಟ್ಟು, ನಿಯಮಗಳನ್ನು ರೂಪಿಸಲು ಬಾಸ್ಕರ್ ಕೋಟ್ಯಾನ್ ನೇತೃತ್ವದಲ್ಲಿ ಕಂಬಳದ ವ್ಯವಸ್ಥಾಪಕರು, ಕೋಣಗಳ ಯಜಮಾನರು ಸೇರಿತೆ 15 ಮಂದಿಯನ್ನು ಒಳಗೊಂಡ ಸಮಿತಿಯನ್ನು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯಲ್ಲಿ ರಚಿಸಲಾಯಿತು.WhatsApp Image 2021-04-18 at 11.14.50 AMಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಪಿ.ಆರ್ ಶೆಟ್ಟಿ ಅಧ್ಯಕ್ಷತೆಯಲ್ಲಿ‌ ನಡೆದ ಸಭೆಯಲ್ಲಿ ಪ್ರಮುಖವಾಗಿ ಶಿಸ್ತು, ನಿಯಮ ರೂಪಿಸುವ ಸಮಿತಿ ರಚನೆ, ಕಂಬಳದ ಸಂದರ್ಭದಲ್ಲಿ ನಡೆಯುವ ಲೋಪಗಳನ್ನು ಸರಿಪಡಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಚರ್ಚಿಸಲಾಯಿತು. ತಿಂಗಳೊಳಗೆ ನಿಯಮಗಳನ್ನು ರೂಪಿಸುವ ಸಮಿತಿಯನ್ನು ರಚಿಸಿ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು. ಮುಂದಿನ ಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡುವುದರ ಕುರಿತು ನಿರ್ಧಾರ ತೆಗೆದುಕೊಳ್ಲಲಾಯಿತು.

ಪಿ.ಅರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊರೊನಾದ ಆತಂಕದ ನಡುವೆಯೂ ಈ ಬಾರಿ ಕಂಬಳ ನಡೆಯುವಲ್ಲಿ ಕಂಬಳಕ್ಕೆ ಸಂಬಂದಪಟ್ಟ ಎಲ್ಲ ವರ್ಗದವರ ಪ್ರೋತ್ಸಾಹ ಅಪಾರ. ರಾಜ್ಯ ಸರ್ಕಾರವು ಅನುದಾನ ನೀಡಲು ಪ್ರಾರಂಬಿಸಿದ್ದು, ಇದಕ್ಕೆ ಅನುಸಾರವಾಗಿ ನಿಯಮ, ಶಿಸ್ತಿನೊಂದಿಗೆ ಕಂಬಳ ನಡೆಸುವ ಜವಾಬ್ದಾರಿಯೂ ಕಂಬಳ ಪ್ರತಿಯೊಬ್ಬರ ಮೇಲಿದೆ ಎಂದರು.

ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಮಾತನಾಡಿ, ಕಂಬಳದಲ್ಲಿ ತೊಡಗಿಸುವ ಪ್ರತಿಯೊಬ್ಬರು ತಮ್ಮ ತಮ್ಮ ಕರ್ತವ್ಯ ಪ್ರಜ್ಞೆಯಿಂದ ನಡೆಸಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಬಳದ ಹೆಸರು ಬರುತ್ತಿರುವುದರಿಂದ ಯಾವುದೇ ಲೋಪಗಳಾಗದ ರೀತಿಯಲ್ಲಿ ನಾವು ಜವಾಬ್ದಾರಿಯಿಂದ ಮುನ್ನಡೆಯಬೇಕಾಗಿದೆ. ಕಂಬಳದಲ್ಲಿ ತೀರ್ಪುಗಾರರ ಕಾಲೆಳೆಯುವ ಪ್ರಯತ್ನಗಳು ನಡೆಯುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಕಂಬಳ‌ ಸಮಿತಿಯ ಗೌರವ ಸಲಹೆಗಾರ, ಐಕಳ ಕಂಬಳ ಸಮಿತಿಯ ಅದ್ಯಕ್ಷ ಬೆಳಪು ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಹಲವಾರು ಹೋರಾಟಗಳಿಂದಾಗಿ ಕಂಬಳವು ಉಳಿದಿದೆ. ಅದನ್ನು ಮತ್ತಷ್ಟು ಉತ್ತಮಗೊಳಿಸುವ ಜವಾಬ್ದಾರಿ ನಮ್ಮದಾಗಬೇಕು. ಸರ್ಕಾರವು ಅನುದಾನವನ್ನು ನೀಡುವುದರಿಂದ ಅದಕ್ಕೆ ಪೂರಕವಾಗಿ ನೀತಿ ನಿಯಮಗಳನ್ನು ರೂಪಿಸಬೇಕು.

ಮಾತ್ರವಲ್ಲ ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೂ ತರಬೇಕಾಗಿದೆ. ಎಲ್ಲರೂ ಒಗ್ಗಟ್ಟಿನೊಂದಿಗೆ ಕೆಲಸ ಮಾಡಿದರೆ ಕಂಬಳವನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದು ಎಂದರು. ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಏರ್ಮಾಳು ರೋಹಿತ್ ಹೆಗ್ಡೆ, ಬಾರ್ಕೂರು ಶಾಂತರಾಮ ಶೆಟ್ಟಿ, ಭಾಸ್ಕರ್ ಕೋಟ್ಯಾನ್ , ಪ್ರಧಾನ ಕಾರ್ಯದರ್ಶಿ ಎಡ್ತೂರು ರಾಜೀವ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಪೂಜಾರಿ, ಉಪಾಧ್ಯಕ್ಷರಾದ ದಿನೇಶ್ ಮಾಳ, ಚಂದ್ರಹಾಸ ಸನಿಲ್ ಉಪಸ್ಥಿತರಿದ್ದರು. ವಿವಿಧ ಕಂಬಳ ಸಮಿತಿಯ ಪದಾದಿಕಾರಿಗಳಿ, ಕೋಣಗಳ ಯಾಜಮಾನರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter