ಶ್ರೀನಿವಾಸಪುರ: ಸರ್ಕಾರ ಹಠ ಬಿಟ್ಟು ಸೌಹಾರ್ದಯುತವಾಗಿ ಕೆ.ಎಸ್.ಆರ್.ಟಿ.ಸಿ.ನೌಕರರ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಸಾರ್ವಜನಿಕರಿಗೆ ಆಗಿರುವ ತೊಂದರೆಗಳನ್ನು ನಿವಾರಣೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳ ಬೇಕೆಂದು ಏ.10 ರಂದು ಶನಿವಾರ ಶಾಸಕ ಕೆ.ಆರ್.ರಮೇಶ್ ಕುಮಾರ್ ಒತ್ತಾಯಿಸಿದರು. ನಗರದ ತಮ್ಮ ಖಾಸಗಿ ಕಚೇರಿಯಲ್ಲಿ ಏರ್ಪಡಿಸಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ , ಸಾರಿಗೆ ನೌಕರರು ತಮ್ಮ ಕುಟುಂಬದವರೇ ಆಗಿದ್ದುಹಬ್ಬ ಹತ್ತಿರ ಇರುವ ಸಮಯದಲ್ಲಿ ಅವರ ಕುಟುಂಬಗಳು ನರಳದಂತೆ ತಡೆಯುವ ಉದ್ದೇಶದಿಂದ ಮಾದ್ಯಮದ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಿರುವುದಾಗಿ ತಿಳಿಸಿದರು . ಸರ್ಕಾರ ಎಸ್ಮಾ ಜಾರಿ ಮಾಡುವುದನ್ನು ಬಿಟ್ಟು ಶಾಂತಿ , ಸಾವಧಾನವಾಗಿ ಚರ್ಚೆ ಮೂಲಕ ಕಾರ್ಮಿಕರ ಹಿತ ಕಾಪಾಡುವುದರೊಂದಿಗೆ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆಯೆಂದರು.
ಸಾರಿಗೆ ಸಿಬ್ಬಂದಿಯೂ ಹತಾಶರಾಗದೆ , ಹಟಕ್ಕೆ ಬೀಳದೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಿದ್ದರಾಗಿರಬೇಕೆಂದು ಸಲಹೆ ನೀಡಿದರಲ್ಲದೆ , ನಾವು ಸದಾಕಾಲವೂ ದುಡಿಯುವ ವರ್ಗದ ಹಾಗೂ ಕಾರ್ಮಿಕರ ಪರವಾಗಿ ನಿಲ್ಲುವ ಭರವಸೆ ನೀಡಿದರು . ಸರ್ಕಾರ ತನ್ನ ಪಂಚೇಂದ್ರಿಯಗಳನ್ನು ಕಳೆದು ಕೊಂಡಿದೆ ಎಂದು ಟೀಕಿಸಿದ ಅವರು , ಸ್ವಯಂ ಪ್ರೇರಿತವಾಗಿ ಸರ್ಕಾರ ನಮ್ಮ ಸಹಕಾರ ಸಲಹೆ ಬಯಸಿದರೆ ನೀಡಲು ಸಿದ್ದನಿದ್ದೇನೆ , ಎರಡು ಮೂರು ದಿನ ಕಳೆದು ತಾವೇ ಸ ೦ ಬ ೦ ದ ಪಟ್ಟ ಮಂತ್ರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದರು . ಪತ್ರಿಕಾಗೋಷ್ಠಿಯಲ್ಲಿ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ , ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಂ ಶ್ರೀನಿವಾಸ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್ ಅಕ್ಬರ್ ಷರೀಫ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ , ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ವೆಂಕಟರೆಡ್ಡಿ, ಎಸ್.ವಿ.ಸುಧಾಕರ್ , ಮುಂತಾದವರು ಉಪಸ್ಥಿತರಿದ್ದರು .
