ಪೊಳಲಿ:ಬಂಟ್ವಾಳ ವಿಶ್ವಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಇದರ ವತಿಯಿಂದ ಉಡುಗೆ ತೊಡುಗೆಗಳಿಂದ ಪಾವಿತ್ರ್ಯಕ್ಕೆ ಧಕ್ಕೆಯಾಗಬಾರದು ಎನ್ನುವ ಉದ್ಧೇಶದಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಗೆ ತಕ್ಷಣ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮನವಿ ನೀಡಿದರು.
ಹಿಂದೂ ಸಂಘಟನೆಯ ಕಾರ್ಯಕರ್ತರು ಬಿಸಿರೋಡು ಕೈಕಂಬ ದ್ವಾರದಿಂದ, ಮಾರಿಪಲ್ಲ ಪೊಳಲಿ ದ್ವಾರದಿಂದ,ಗುರುಪುರ ಕೈಕಂಬದ ದ್ವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಳಲಿ ದೇವಸ್ಥಾನಕ್ಕೆ ಹಿಂದೂ ಕಾರ್ಯಕರ್ತರು ಆಗಮಿಸಿದರು
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ ,ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ಸತೀಶ್, ಕಾರ್ಯದ್ಯಕ್ಷ ಭಾಸ್ಕರ ಧರ್ಮಸ್ಥಳ, ಬಂಟ್ವಾಳ ವಿ.ಹಿಂ.ಪ.ಪ್ರಖಂಡ ಕಾರ್ಯದರ್ಶಿ ಸುರೇಶ್ ಬೆಂಜನಪದವು ,ವಿ.ಹಿಂ.ಪ. ಬಂಟ್ವಾಳ ಪ್ರಖಂಡ ಅಧ್ಯಕ್ಷ ಪದ್ಮನಾಭ , ವಿ.ಹಿಂ.ಪ ಜಿಲ್ಲಾ ಸಹ ಸಂಚಾಲಕ ಭರತ್ ಕುಮ್ಡೇಲ್, ಮಂಗಳೂರು ಜಿ.ಸಹ ಸತ್ಸಂಗ ಪ್ರಮುಖ್ ವಸಂತ ಗುರುಪುರ, ಜಿಲ್ಲಾ ಸಹ ಸಂಚಾಲಕ ಗುರುರಾಜ ಬಂಟ್ವಾಳ, ಬಂಟ್ವಾಳ ಪ್ರಖಂಡ ಸಂಚಾಲಕ ಶಿವಪ್ರಸಾದ್ ತುಂಬೆ, ವಿಟ್ಲ ಪ್ರಖಂಡ ಅಧ್ಯಕ್ಷ ಕೃಷ್ಣಪ್ಪ ಹಾಗೂ ಅಶೋಕ್ ಸರಪಾಡಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸಮ್ಮುಖದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಅವರಲ್ಲಿ ಮನವಿ ನೀಡಿದರು

