ಮೂಡುಬಿದಿರೆ : ಬಿಜೆಪಿ ಮೂಡಬಿದಿರೆ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಯುಗಾದಿ ಉತ್ಸವವು ಲಾಡಿ ಹಜಂಕಾಲ ಬೆಟ್ಟ ದೈವಸ್ಥಾನದಲ್ಲಿ ನಡೆಯಿತು. ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಯುಗಾದಿ ಆಚರಣೆಯ ಮಹತ್ವವನ್ನು ತಿಳಿಸಿದರು. ಬಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.WhatsApp Image 2021-04-14 at 1.31.34 PM
ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಪೂಜಾರಿ, ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ್ ಶೆಟ್ಟಿಗಾರ್, ರಾಜೇಶ್ ಮಲ್ಯ, ಕೇಶವ ಕರ್ಕೇರಾ, ಪಾಶ್ರ್ವನಾಥ ಬಲ್ಲಾಳ್, ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸಾತ್ವಿಕ್ ಮಲ್ಯ ಉಪಸ್ಥಿತರಿದ್ದರು. ಅನಿತಾ ಬಲ್ಲಾಳ್ ಸ್ವಾಗತಿಸಿದರು. ದಯಾನಂದ ಲಾಡಿ ನಿರೂಪಿಸಿದರು. ಜಿತೇಶ್ ವಂದಿಸಿದರು

By suddi9

Leave a Reply

Your email address will not be published. Required fields are marked *