ಚಾಮರಾಜನಗರ: ಯುಗಾದಿ ಹಬ್ಬಕ್ಕೆ ಹೊಸಬಟ್ಟೆ ತೆಗೆದುಕೊಡಲಿಲ್ಲವೆಂದು ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಳ್ಳೇಗಾಲದ ಬಸ್ತೀಪುರದಲ್ಲಿ ನಡೆದಿದೆ.
ಮೃತ ಬಾಲಕಿ. ಹರ್ಷಿತಾ (12) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುಗಾದಿ ಹಬ್ಬ ಹತ್ತಿರವಿರುವುದರಿಂದ ಹರ್ಷಿತಾ ಹೊಸ ಬಟ್ಟೆಗಾಗಿ ತಂದೆ ಬಸವರಾಜು ಬಳಿ ಹಠ ಹಿಡಿದಿದ್ದಳು.
ಸಂಬಳ ಬಂದ ನಂತರ ತೆಗೆದುಕೊಡುವುದಾಗಿ ಪಾಲಕರು ಸಮಾಧಾನಪಡಿಸಿದ್ದರು. ಆದರೆ, ಸಮಾಧಾನಗೊಳ್ಳದ ಮಗಳು ಮನೆಯವರು ಹೊರ ಹೋಗಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
