ಮುಂಬಯಿ : ಮುಂಬಯಿಯಲ್ಲಿ  ಹಿರಿಯ ಹೊಟೇಲು ಉದ್ಯಮಿ, ಬಂಟ್ವಾಳ ಅರಳ ಇಲ್ಲಿನ ಹೊಸಬೆಟ್ಟುಗುತ್ತು ಮಂಜಯ್ಯ ಶೆಟ್ಟಿ (೮೨.) ಅಲ್ಪಕಾಲಅನಾರೋಗ್ಯದಿಂದ  ಕಳೆದ ಬುಧವಾರ ಮಂಗಳೂರಿನ  ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

Manjayya Shetty (D)

ಮಂಜಯ್ಯ ಶೆಟ್ಟಿ ಮುಂಬಯಿಯ  ಸಯಾನ್ ನಲ್ಲಿ  ವಾಸವಾಗಿದ್ದ ಅವರು  ಓರ್ವ ಹೊಟೇಲು ಉದ್ಯಮಿ ಆಗಿ ಧಾರ್ಮಿಕ ಚಿಂತಕರಾಗಿ ಅನೇಕ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಸಹಕಾರಿ ಯಾಗಿದ್ದರು.  ತನ್ನ ಹುಟ್ಟೂರು ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಜೇರ್ಣೋದ್ದಾರ ಬ್ರಹ್ಮಕಲಶೋತ್ಸವದ ಮಹಾದ್ವಾರ, ಗಣಪತಿ ದೇವರ ಪ್ರತಿಮೆಗೆ ಬೆಳ್ಳಿ ಹಾಗೂ ಅನನ್ಯ ಸೇವೆಗಳನ್ನು ನೆರವೇರಿಸಿರುತ್ತಾರೆ.

ಮೃತರು ಪತ್ನಿ ಗಿರಿಜಾ ಎಂ.ಶೆಟ್ಟಿ, ಪುತ್ರ ಬ್ರಿಜೇಶ್ ಶೆಟ್ಟಿ, ಸುಪುತ್ರಿ ಡಾ| ತೇಜಸ್ವಿ ಎಸ್.ಶೆಟ್ಟಿ ಅಳಿಯ ಡಾ| ಸಚಿನ್ ಆಳ್ವ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *