ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಪ್ರಥಮ ಚೆಂಡಿನ ಉತ್ಸವ ಏ.೬ ರಂದು ಮಂಗಳವಾರ ಪ್ರಾರಂಭಗೊಡಿತು. ದೇವಳದ ತಂತ್ರಿಗಳಾದ ಸುಭ್ರಹ್ಮಣ್ಯ ತಂತ್ರಿ ,ಹಾಗೂ ದೇವಳದ ಅರ್ಚಕರಾದ ಮಾಧವ ಭಟ್,ನಾರಾಯಣ ಭಟ್, ರಾಮ್ ಭಟ್, ಪರಮೇಶ್ವರ ಭಟ್, ಅರ್ಚಕ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಮೊಕ್ತೇಸರರಾದ ಯು. ತಾರನಾಥ ಅಳ್ವ, ಚೇರಾ ಸೂರ್ಯ ನಾರಾಯಣ ರಾವ್,ಅಮ್ಮುಂಜೆಗುತ್ತಿನವರು, ಉಳಿಪಾಡಿಗುತ್ತಿನವರು, ಕಾರ‍್ಯನರ‍್ವಹಣಾಧಿಕಾರಿ ಪಿ ಜಯಮ್ಮ, ಹಾಗೂ ದೇವಳದ ಪ್ರಮುಖರಾದ ಊರಿನ ಭಕ್ತಾಧಿಗಳು ದೇವಿಯಲ್ಲಿ ಪ್ರಾರ್ಥಿಸುತ್ತಾರೆ.

601
ಮೂಡಬಿದ್ರೆ ಚೌಟರ ಸೀಮೆಯ ಪದ್ಮನಾಭ ಚಮಗಾರ ತಯಾರಿಸಿಕೊಟ್ಟ ಸುಮಾರು ೧೮ ಕೇಜಿ ಭಾರದ ಬ್ರಹದ್ದಾಕರದ ಚೆಂಡನ್ನು ಕೊಂಬು ಬ್ಯಾಂಡ್ ವಾಲಗದೊಂದಿಗೆ ಮೆರವಣಿಗೆಯಲ್ಲಿ ಪವಿತ್ರವಾದ ಚೆಂಡಿನಗದ್ದೆಗೆ ತರಲಾಗುವುದು.6-1

ಗದ್ದೆಯ ಉತ್ತರದಿಕ್ಕಿನ ಸುಲ್ತಾನ್ ಕಟ್ಟೆಯ ಬಳಿ ನಿಂತ ಅಮ್ಮುಂಜೆ ಹಾಗೂ ಉಳಿಪಾಡಿಗುತ್ತಿನವರನ್ನು ಸ್ವಾಗತಿಸಿ ಚೆಂಡಿನ ಮಧ್ಯ ಭಾಗಕ್ಕೆ ಕರೆದುಕೊಂಡು ಬಂದು ಮಟ್ಟಿ ಜೋಗಿಮನೆತನದವರು ಚೆಂಡಿನ ಆಟ ಸುರುಮಾಡಲು ಈರೀತಿ ಕರೆಯುತ್ತಾರೆ.6-02

“ಅಮ್ಮುಂಜೆ ಮಣೇಲ್ ಚೆಂಡ್ಗ್ ದುಂಬುಬಲೇ ಮಲ್ಲೂರು ಬೊಳ್ಳೂರು ಚೆಂಡ್ಗ್ ಓರ್ಮೆಡ್ ಜಪ್ಪುಲೆ ಎಂದು ಹೇಳಿದಾಗ ಚೆಂಡುಹಿಡಿದಿದ್ದ ಗಾಣಿಗ ಮನೆತನದವರು ಚೆಂಡನ್ನು ನಡುಮನೆ ಕಂಠೀರಾಯ ರಾಮಕೃಷ್ಣ ಭಟ್ ಅರ್ಚಕರಲ್ಲಿ ಕೊಡುತ್ತಾರೆ.6vppolali chendu

ಆಗ ಅವರು ಚೆಂಡನ್ನು ಹಾರಿಸಿ ಎಸೆಯುತ್ತಾರೆ. ಆಗ ಅಮ್ಮುಂಜೆ ಮಳಲಿ ಕಡೆಯ ಯುವಕರು , ಮಕ್ಕಳು ಚೆಂಡಾಟದಲ್ಲಿ ಭಾಗವಹಿಸುತ್ತರೆ. ಚೆಂಡು ಗದ್ದೆಯ ಬದಿಗೆ ಮುಟ್ಟಿಸಿ ಚೆಂಡು ಹಾರಿಸಿದವರಿಗೆ ಎತ್ತಿಕೊಂಡು ಬಂದು ಕೊಟ್ಟರೆ ಗೆಲುವು ಅವರಿಗಾಗುತ್ತದೆ.6vp polali chendu

ಹೀಗೆ ದಿನಕ್ಕೆ ಮೂರು ಬಾರಿ ಚೆಂಡಾಟ ನಡೆಯುವುದು.ನಂತರ ಚೆಂಡನ್ನು ಶ್ರೀ ದೇವಳಯಕ್ಕೆ ತಂದು ಶ್ರೀ ದೇವಿಗೆ ಪೂಜೆ ನಡೆದು ದೇವಸ್ಥಾನಕ್ಕೆ ಒಂದು ಸುತ್ತು ಮೆರವಣಿಗೆಯಲ್ಲಿ ತಂದಲ್ಲಿಗೆ ಚೆಂಡಿನ ಉತ್ಸವ ಮುಕ್ತಾಯವಾಗುವುದು. ಇದಕ್ಕೆ ಜೀಟಿಗೆ ಸಲಾಂ ಎಂದು ಕರೆಯುತ್ತಾರೆ.ಈಗೇ ಪೊಳಲಿಯಲ್ಲಿ ಐದು ದಿನಗಳ ಚೆಂಡಿನ ಉತ್ಸವ ನಡೆಯುತ್ತದೆ.

ಈ ಭಾರಿ  ಕೋವಿಡ್-೧೯ ಹಿನ್ನೆಲೆಯಲ್ಲಿ ಸರಕಾರ ಹಾಗೂ ದ.ಕ.ಜಿಲ್ಲಾಕಾರಿಗಳ ಆದೇಶದಂತೆ ಸರಳ ಹಾಗೂ ಸಾಂಕೇತಿಕ ಜಾತ್ರೆ ಆಚರಣೆಯಾಗುತ್ತಿದೆ.

By suddi9

Leave a Reply

Your email address will not be published. Required fields are marked *