ಬಂಟ್ವಾಳ:  ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್  ಮಂಗಳೂರು ಇದರ  ಸರಪಾಡಿ ಘಟಕದ ವಾರ್ಷಿಕೋತ್ಸವ ಪ್ರಯುಕ್ತ ಯಕ್ಷಗಾನ, ಹಾಗೂ ಸಾಧಕ ಕಲಾವಿದರಿಗೆ ಸನ್ಮಾನ  ಕಾರ್ಯಕ್ರಮ ಎ.೪ರಂದು ಸಂಜೆ ಅಜಿಲಮೊಗಲರು, ಕುಟ್ಟಿಕಳ ಜೈ ಹನುಮಾನ್ ಕಟ್ಟೆಯಲ್ಲಿ ನಡೆಯಲಿದೆ.                                       IMG-20210402-WA0028

ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ  ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪದಾಽಕಾರಿಗಳು ಭಾಗವಹಿಸಲಿದ್ದು, ಪುಂಜಾಲಕಟ್ಟೆ ಸ.ಪ್ರೌ.ಶಾಲೆಯ ಉಪ ಪ್ರಾಂಶುಪಾಲ, ಯಕ್ಷ ಸಂಘಟಕ ಉದಯ ಕುಮಾರ್ ಜೈನ್ ಮತ್ತು ಪಾವಂಜೆ ಮೇಳದ ಹಿರಿಯ ಹಿಮ್ಮೇಳವಾದಕ ಪ್ರಶಾಂತ್ ಶೆಟ್ಟಿ ವಗೆನಾಡು  ಅವರನ್ನು ಸಮ್ಮಾನಿಸಲಾಗುವುದು. ಬಳಿಕ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಘಟಕಾಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *