Published On: Fri, Mar 26th, 2021

ಸಚಿವ ಸುಧಾಕರ್ ಹೇಳಿಕೆಗೆ ಅಭಯಚಂದ್ರ ಜೈನ್ ಖಂಡನೆ

ಮೂಡುಬಿದಿರೆ: ಸಿ.ಡಿ ಪ್ರಕರಣದಲ್ಲಿ ರಾಜ್ಯದ ೨೨೫ ಶಾಸಕರು ನೈತಿಕ ಪರೀಕ್ಷೆಗೊಳಪಡಲಿ ಎಂದು ಸಚಿವ ಸುಧಾಕರ್ ಅವರು ಸದನದಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸುತ್ತೇನೆ. ರಾಜ್ಯದಲ್ಲಿ ಈಗಲೂ ಕೆಲವು ಆದರ್ಶ ಶಾಸಕರಿದ್ದಾರೆ. ಎಲ್ಲರ ಬಗ್ಗೆ ಆರೋಪ ಹೊರಿಸುವುದು ಸರಿ ಅಲ್ಲ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಕರ್ನಾಟಕವನ್ನು ನಿರ್ಲಕ್ಷಿಸಿದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಆರ್ಥಿಕ ಕುಸಿತದಿಂದ ಜನರ ಬದುಕು ದುಸ್ತಿರವಾಗಿದೆ.WhatsApp Image 2021-03-26 at 5.24.34 PM

ಈ ಬಾರಿಯ ಉಪಚುನಾವಣೆಯಲ್ಲಿ ಮೋದಿ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲುತ್ತೇವೆ ಎಂಬ ಭರವಸೆ ಬಿಜೆಪಿಗೆ ಇಲ್ಲ. ಬೆಳಗಾವಿ ಲೋಕಸಭಾ ಉಪಚುನಾವಣೆಗೆ ೨೮ ವರ್ಷದ ಸುದೀರ್ಘ ರಾಜಕೀಯ ಅನುಭವ ಇರುವ ಹಾಗೂ ಎರಡು ಬಾರಿ ಸಚಿವರಾಗಿದ್ದ ಕಾಂಗ್ರೆಸ್‍ನ ಸತೀಶ್ ಜಾರಕಿಹೊಳಿ ವಿರುದ್ಧ ಕಣಕ್ಕಿಳಿದಿರುವವ ಮಾಜಿ ಕೇಂದ್ರ ಸಚಿವ ಬಿಜೆಪಿಯ ಸುರೇಶ್ ಅಂಗಡಿ ಅವರ ಪತ್ನಿ ಮಂಗಲ ಅಂಗಡಿ ಗೃಹಿಣಿಯಾಗಿದ್ದು ಅವರಿಗೆ ರಾಜಕೀಯ ಅನುಭವ ಇಲ್ಲ. ಅನುಕಂಪದ ಅಲೆಯಲ್ಲಿ ಚುನಾವಣೆ ಗೆಲ್ಲುತ್ತಾರೆ ಎಂಬ ಬಿಜೆಪಿಯ ಲೆಕ್ಕಾಚಾರವನ್ನು ಬೆಳಗಾವಿಯ ಮತದಾರರು ಸುಳ್ಳಾಗಿಸಲಿದ್ದಾರೆ ಎಂದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter