Published On: Thu, Mar 25th, 2021

ಸಚಿನಾ ಪಿ.ಜಿ ಯವರ ಚಿಕಿತ್ಸೆಗೆ ಸ್ಪಂದಿಸುವಿರಾ???

ಪುತ್ತೂರು : ತಾಲೂಕಿನ ಕಸಬ ಪಡ್ಡಾಯೂರು ನಿವಾಸಿ ಸಚಿನಾ ಪಿ.ಜಿ ಯವರು ಕಳೆದ ಜ 01 ರಂದು ಬಿ.ಸಿ ರೋಡು – ಬಂಟ್ವಾಳ ಸರ್ಕಲ್ ಸಮೀಪ ನಡೆದ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಗಾಯಗೊಂಡು ಇದೀಗ ಮಂಗಳೂರಿನ ಎ.ಜೆ ಹಾಸ್ಪಿಟಲ್ ನಲ್ಲಿ ದಾಖಾಲಾಗಿ ಚಿಕಿತ್ಸೆ ಪಡೆಯುತ್ತಿರುವವರು. ಇವರು ಪೊಳಲಿ ನಿವಾಸಿ ಖಾಸಗಿ ಬಸ್ಸು ಚಾಲಕರಾಗಿರುವ ದಯಾನಂದ ಅವರ ಪತ್ನಿ ಸಚಿನಾ . ತೀರಾ ಬಡ ಕುಟುಂಬದವರಾದ ಇವರಿಗೆ ಖಾಸಗಿ ಡ್ರೈವರ್ ದುಡಿಮೆಯೆ ಇವರ ಪಾಲಿಗೆ ವರಮಾನವಾಗಿದೆ . ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಗೆ ಒಳಪಟ್ಟು ಒಂದು ತಿಂಗಳು ಕಳೆದರೂ ಕೋಮಾ ಸ್ಥಿತಿಯಲ್ಲೇ ಇದ್ದಾರೆ.

WhatsApp Image 2021-03-25 at 5.11.32 PMಈಗಾಗಲೇ ಆಸ್ಪತ್ರೆ ಶುಲ್ಕ 15,00,000 (ಹದಿನೈದು ಲಕ್ಷ) ರೂಪಾಯಿ ದಾಟಿದ್ದು, ತನ್ನದೆಲ್ಲವನ್ನೂ ವೈಯಿಸಿದರೂ ಕುಟುಂಬವು ಭರಿಸಲು ಅಶಕ್ತವಾಗಿ ಕಣ್ಣೀರಿಡುತ್ತಿದೆ.ಬಡವರಾದ ಪತಿ ದಯಾನಂದ ಮತ್ತು ಅಣ್ಣ ಪ್ರದೀಪ್ ರವರು ಇದ್ದ ಸಣ್ಣ ಖಾಸಗಿ ಉದ್ಯೋಗವನ್ನು ಆರೈಕೆಗಾಗಿ ತಿಂಗಳುಗಟ್ಟಲೆಯಿಂದ ಮಾಡಲಾಗದೆ ವರಮಾನವೇ ಇಲ್ಲದಾಗಿದೆ. ಒಂದೂವರೆ ವರ್ಷದ ಹೆಣ್ಣು ಮಗವನ್ನೂ ಹೊಂದಿರುವ ಇವರು ಆಸ್ಪತ್ರೆ ಶುಲ್ಕವನ್ನು ಭರಿಸಲು ಸಾದ್ಯವಾಗದೆ ಪರದಾಡುತ್ತಿದ್ದಾರೆ. ಸಹೃದಯಿ ದಾನಿಗಳ ಸಹಾಯಕ್ಕಾಗಿ ಕಣ್ಣೀರಿನ ಬೇಡಿಕೆಯಿಟ್ಟು ಅಂಗಲಾಚುತ್ತಿದೆ. ದಯವಿಟ್ಟು ಈ ಬಡ ಕುಟುಂಬದ ಕಣ್ಣೀರೊರೆಸುವಲ್ಲಿ ತಾವುಗಳು ತಮ್ಮ ಕೈಲಾಗುವ ಸಹಾಯ ಮಾಡುವಿರಾ?

A/c 520101009871515
IFSC code- CORP0000224
CORPORATION BANK
BOLWAR PUTTUR.
Mbl no 8722454455
8105486737

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter