ಬಂಟ್ವಾಳ: ಬಂಟ್ವಾಳ ತಾಲೂಕು ಮೂಲ್ಯರ ಯಾನೆ ಕುಲಾಲ ಕುಂಬಾರರ ಸೇವಾ ಸಂಘದ ಕಜೆಕಾರು ಘಟಕದ ೫ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಮಾ.೨೧ರಂದು ಮಾಡ ಪಲ್ಕೆಯಲ್ಲಿ ನಡೆಯಿತು.ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಕಾರ‍್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕ ತಿಯನ್ನು ಬಾಲ್ಯದಲ್ಲಿಯೇ ಹೆತ್ತವರು ಕಲಿಸಬೇಕು. ಎಳವೆಯಲ್ಲಿಯೇ ಮಕ್ಕಳಿಗೆ ಧಾರ್ಮಿಕ ಚಿಂತನೆಯ ಅರಿವು ಮೂಡಿಸಬೇಕು. ದುಶ್ಚಟಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಮೂಲ್ಯರ ಯಾನೆ ಕುಲಾಲ ಕುಂಬಾರರ ಸೇವಾ ಸಂಘದ ಅಧ್ಯಕ್ಷ ಲೋಕನಾಥ ಪಟೀಲು ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಂಬಾರರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಲ್ಲಾಳ್, ಬೆಳ್ತಂಗಡಿ ತಾ. ಅಧ್ಯಕ್ಷ ಹರೀಶ್ ಕಾರಿಂಜ, ಪಿಲಾತಬೆಟ್ಟು ಸಿ.ಎ.ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ, ಬಂಟ್ವಾಳ ಕುಲಾಲ ಕುಂಬಾರರ ಸಂಘದ ಮಾಜಿ ಅಧ್ಯಕ್ಷ ಮಚ್ಛೆಂದ್ರ ಸಾಲ್ಯಾನ್, ನಾಟಕ ರಚನೆಕಾರ ಮತ್ತು ಹಿರಿಯ ಸಾಹಿತಿ ಪಿ.ಕೆ.ಟೈಲರ್ ಪುಂಜಾಲಕಟ್ಟೆ. ಮಾಜಿ ಸೈನಿಕ ಸತೀಶ್ ಸಾಲ್ಯಾನ್ ಕಜೆಕಾರು, ಪ್ರಗತಿಪರ ಕೃಷಿಕ ಪದ್ಮನಾಭ ಅಕ್ಕಮಕೋಡಿ, ವಾಸು ಬಂಗೇರ ಕೊಡೆಂಚಡ್ಕ, ಕಕ್ಯಪದವು ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ ದಿನೇಶ್ ದಲ್ಯಂತಬೆಟ್ಟು , ಮಂಗಳೂರು ಕಿಟ್ಟಲ್ ಮೆಮೋರಿಯಲ್ ಕಾಜೇಜಿನ ಪ್ರಾಶುಂಪಾಲ ವಿಠಲ ಅಬುರ, ಮಂಗಳೂರು ಕೊಲ್ಯ ಸಂಘದ ಅಧ್ಯಕ್ಷ ಪ್ರವೀಣ, ಉದ್ಯಮಿ ಗಣೇಶ್ ಮೂಲ್ಯ ಅನಿಲಡೆ ಅವರು ಉಪಸ್ಥಿತರಿದ್ದರು.
ಈ ಸಂದರ್ಭ ಸಂಘಕ್ಕೆ ಶ್ರೀ ಧಾಮ ಮಾಣಿಲದ ವತಿಯಿಂದ ೧೦ ಸಾವಿರ ರೂ. ಚೆಕ್‌ನ್ನು ಸಂಘದ ಅಧ್ಯಕ್ಷರಿಗೆ ಸ್ವಾಮೀಜಿ ಅವರು ಹಸ್ತಾಂತರಿಸಿದರು. ಸಂಘಕ್ಕೆ ಸ್ಥಳ ಖರೀದಿಗಾಗಿ ಧನ ಸಹಾಯ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.
ಶಿಕ್ಷಕ ಸುಧಾಕರ ಸ್ವಾಗತಿಸಿ, ಪ್ರಸ್ತಾವಿಸಿದರು. ಹೇಮಲತಾ ವಂದಿಸಿದರು. ಆಕಾಶ್ ಮಾಣೂರು ಕಾರ‍್ಯಕ್ರಮ ನಿರೂಪಿಸಿದರು.
