ಪುತ್ತೂರು:  ಇಂದು ಸಂಜೆ 4.30 ಕ್ಕೆ ಹೋಟೇಲ್ ದೀಪ ಕ೦ಫರ್ಟ್ಸ್ ನಲ್ಲಿ ಗೆಜ್ಜೆಗಿರಿ ಗೆ ಸಂಬಂಧಿಸಿ ನ್ಯಾಯಾಲಯ ನೀಡಿರುವ ತೀರ್ಪನ್ನು ತಿರುಚಿ ಹೇಳಿರುವ ಶ್ರೀಧರ ಪೂಜಾರಿಯವರ ಸುಳ್ಳು ಮಾಹಿತಿಯ ಬದಲು ಸತ್ಯಾಂಶ ವನ್ನು ತಿಳಿಸಿಕೊಡಲು ವಿಶ್ವ ಬಿಲ್ಲವರ ಪ್ರಾತಿನಿಧಿಕ ಸಮಿತಿಯಾದ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯಿಂದ ಪತ್ರಿಕಾಗೋಷ್ಠಿ ನಡೆಯಲಿದೆ.

ಈ ಗೋಷ್ಠಿಯಲ್ಲಿ ಸಮಿತಿಯಲ್ಲಿರುವ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರು, ಮುಂಬೈ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷರು, ಕಂಕನಾಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಅಧ್ಯಕ್ಷರು,ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರು, ಗುರುಚಾರಿಟೇಬಲ್ ಟ್ರಸ್ಟ್ ನ ಅಧ್ಯಕರು,ವಿವಿಧ ಬಿಲ್ಲವ ಸಂಘಟನೆಗಳ ಅಧ್ಯಕ್ಷ ರು ಭಾಗವಹಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *