ಸುದ್ದಿ9 ಕೈಕಂಬ: ಬೆಳ್ಳೂರು ಕಾವೇಶ್ವರ ದೇವರ ಸನ್ನಿಧಿಯಲ್ಲಿ ನ.10ರಂದು ಸೋಮವಾರ 20ನೇ ವರ್ಷದ ಸಾರ್ವಜನಿಕ ಶತರುದ್ರಾಭಿಷೇಕ ನಡೆಯಲಿದೆ.

ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ವೇದಮೂರ್ತಿ ಶ್ರೀ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ಸಾರ್ವಜನಿಕ ಶತರುದ್ರಾಭಿಷೇಕ, ಗಣಯಾಗ, ಅಪ್ಪದಪೂಜೆ, ಸೀಯಾಳಾಭಿಷೇಕ, ದೈವತಂಬಿಲ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ ದೀಪದ ರಂಗಪೂಜೆ.ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
