ಮೂಡುಬಿದಿರೆ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ 2020-21 ನೇ ಸಾಲಿನ ಭರತನಾಟ್ಯ ಜ್ಯೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.

ವಿದ್ಯಾರ್ಥಿಗಳಾದ ಜ್ಞಾನಾಮೃತ, ಅಮೋಘ ಹೆಗ್ಡೆ, ತ್ರಿಶಾಜಯರಾಮ್, ಕೌಸ್ತುಭಾ, ಮನ್ವಿತಾ, ಸನ್ಮಿತಾ.ಎಸ್, ಅಥರ್ವ ಹೆಗ್ಡೆ ಕೆ, ಇಬ್ಬನಿ ಸಂದೀಪ್, ಶ್ರೇಯಾ ವಿ. ಕುಂಬಾರ್, ಗಾನಶ್ರೀ ಜೈನ್, ಲಾವಣ್ಯ ಹಾಗೂ ಇಂಚರಾ ಜಿ.ಸಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಶೇ 100 ಫಲಿತಾಂಶ ದಾಖಲಿಸಿದ್ದಾರೆ. ವಿದ್ವಾನ್ ಚಂದ್ರಶೇಖರ ನಾವಡ ಮತ್ತು ಕಲಾಶ್ರೀ ಅವರಲ್ಲಿ ತರಬೇತಿ ಪಡೆದಿರುತ್ತಾರೆ.
