ಬಂಟ್ವಾಳ: ರಾಜರ್ಷಿ, ಪದ್ಮ ವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆ ಆವರ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕದ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ  ಇದರ ಆಶ್ರಯದಲ್ಲಿ ಕೃಷಿ ಉತ್ಸವ ಮತ್ತು ಕರಾವಳಿ ಕಲೋತ್ಸವ-೨೦೨೧ ಬಿ.ಸಿ.ರೋಡ್ ಗೋಲ್ಡನ್ ಪಾರ್ಕ್ ಮೈದಾನದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವೇದಿಕೆಯಲ್ಲಿ ಫೆ.೧೧ರಿಂದ ಫೆ.೨೫ರವರೆಗೆ ನಡೆಯಲಿದೆ.

DSC_2876 (1)
ಫೆ.೧೧ರಂದು ಗುರುವಾರ ಸಂಜೆ ೪.೩೦ ಕ್ಕೆ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಮೈದಾನದವರೆಗೆ ವಿವಿಧ ಕಲಾ ತಂಡಗಳ ಸೇರುವಿಕೆಯಲ್ಲಿ ಜಾನಪದ ದಿಬ್ಬಣದ ಮೆರವಣಿಗೆ ನಡೆಯಲಿದ್ದು, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ .ಆರ್. ಅವರು ಉದ್ಘಾಟಿಸಲಿರುವರು. ಸಂಜೆ ೫.೩೦ಕ್ಕೆ ಕೃಷಿ ಮೇಳ, ಕರಾವಳಿ ಕಲೋತ್ಸವದ ಉದ್ಘಾಟನೆಯನ್ನು ಮಾನ್ಯ ಮುಜರಾಯಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಅವರು ನೆರವೇರಿಸಲಿರುವರು.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವೇದಿಕೆಯನ್ನು ಮೀನುಗಾರಿಕೆ ಬಂದರು ಮತ್ತು ಒಳನಾಡು ಸಚಿವರಾದ ಮಾನ್ಯ ಶ್ರೀ ಎಸ್. ಅಂಗಾರ  ಅವರು ಉದ್ಘಾಟಿಸಲಿರುವರು. ಬಂಟ್ವಾಳ ಶಾಸಕರಾದ ಮಾನ್ಯ ಶ್ರೀ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಮಾಜಿ ಸಚಿವರಾದ ಮಾನ್ಯ ಶ್ರೀ ಬಿ.ರಮಾನಾಥ ರೈ ಅವರು ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಲಿರುವರು. ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಮಾನ್ಯಶ್ರೀ ಯು.ಟಿ.ಖಾದರ್ ಅವರು ಅಮ್ಯೂಸ್‌ಮೆಂಟ್ ಪಾರ್ಕ್ ಉದ್ಘಾಟಿಸಲಿರುವರು.

ಇದೇ ಸಂದರ್ಭದಲ್ಲಿ ಚಿಣ್ಣರ ಲೋಕದ ಸೇವಾ ಸಂಸ್ಥೆಯ ಐಸಿರಿ ಕನ್ನಡ ತುಳು ಆಲ್ಬಂ ಗೀತೆಯ ಬಿಡುಗಡೆ ನಡೆಯಲಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ.ಎಂ.ಮೋಹನ್ ಆಳ್ವ  ಬಿಡುಗಡೆಗೊಳಿಸುವರು. ಈ ಸಂದರ್ಭದಲ್ಲಿ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಲಿಮ್ಕಾ ದಾಖಲೆಯ ಮುಂಬ ಕಲಾ ಜಗತ್ತು ಇದರ ಸಂಚಾಲಕ, ಚಲನ ಚಿತ್ರ ನಟ, ನಿರ್ಮಾಪಕ ನಿರ್ದೇಶಕ ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರಿಗೆ ಕರಾವಳಿ ಕಲಾಸೌರಭ ರಾಜ್ಯ ಪ್ರಶಸ್ತಿ ಮತ್ತು ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಕು.ದಿಯಾ ರಾವ್ ಕುಂಬ್ಳೆ ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ ೭ ಗಂಟೆಗೆ ಚಿಣ್ಣರ ಲೋಕ ಸೇವಾ ಟ್ರಸ್ಟ್ ಮಂಗಳೂರು,ಪಾಂಡೇಶ್ವರ ಶ್ರೀ ಮುನೇಶ್ವರ ಮಹಾಗಣಪತಿ ದೇವಸ್ಥಾನ ಶಾಖೆಯ ವಿದ್ಯಾರ್ಥಿಗಳಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನವಿದೆ.

ಫೆ.೧೨ ರಂದು ಶುಕ್ರವಾರ ಕೃಷಿ ಉತ್ಸವಕ್ಕೆ ಚಾಲನೆ ದೊರಕಲಿದ್ದು, ಬೆಳಗ್ಗೆ ೧೦.೩೦ಕ್ಕೆ ಕೃಷಿ ಸಿರಿ ಕಾರ್ಯಕ್ರಮವನ್ನು ಕುದನೆ ವಾಸುಕಿ ವನ ಧರ್ಮಚಾವಡಿಯ ಶ್ರೀ ವರದರಾಜ್ ಅವರು ಉದ್ಘಾಟಿಸುವರು. ರೈತ ಸಂಘ ಸರಪಾಡಿ ವಲಯ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿರುವರು. ಪ್ರಭಾಕರ ಮಯ್ಯ ನಡ, ಗಣೇಶ್ ಭಟ್ ಎನ್‌ಸಿ.ರೋಡ್, ಡಾ.ನಾಗರಾಜ್, ಜೋ ಪ್ರದೀಪ್ ಡಿಸೋಜ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವರು. ಮಧ್ಯಾಹ್ನ  ಜಾನಪದ ಹಾಡುಗಳು ಬಳಿಕ ಬನಸಿರಿ ಕಾರ್ಯಕ್ರಮದಲ್ಲಿ  ಕೃಷಿಯಲ್ಲಿ ಮಹಿಳೆಯರ ಹಾಗೂ ಯುವಕರ ಪಾತ್ರ ವಿಚಾರಗೋಷ್ಠಿ ನಡೆಯಲಿದ್ದು, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಂಟ್ವಾಳ ಯೋಜನಾಽಕಾರಿ ಜಯಾನಂದ ಪಿ. ಅಧ್ಯಕ್ಷತೆ ವಹಿಸುವರು. ಸುಶೀಲಾ, ಮನಮೋಹನ ಪುತ್ತೂರು, ಮನೋರಮ ಭಟ್,ಸುಕನ್ಯಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ  ಭಾಗವಹಿಸುವರು. ಸಂಜೆ ಚಿಣ್ಣರ ಲೋಕ ವಿದ್ಯಾರ್ಥಿಗಳಿಂದ ಶ್ರೀ ದುರ್ಗಾ ಪರಮೇಶ್ವರಿ ಮಹಾತ್ಮೆ ಯಕ್ಷಗಾನ ಪ್ರದರ್ಶನವಿದೆ.

ಫೆ.೧೩ ರಂದು ತಾಂತ್ರಿಕ ಸಿರಿ, ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳ ಅವಿಷ್ಕಾರ ಮತ್ತು ಬಳಕೆ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಉದ್ಘಾಟಿಸಲಿರುವರು. ಬಂಟ್ವಾಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರೇಮಾ ಅಧ್ಯಕ್ಷತೆ  ವಹಿಸುವರು. ಗಣಪತಿ ಭಟ್, ಗೋವಿಂದ ಪ್ರಸಾದ್, ನಂದನ್ ಶೆಣೈ, ಹರಿದಾಸ್ ಬೆಳ್ತಂಗಡಿ,ರಾಮ ಕಿಶೋರ್ ಮಂಚಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವರು. ಮಧ್ಯಾಹ್ನ ತುಳು ಪದ ಗೊಂಚಿಲ್ ಬಳಿಕ ವನಸಿರಿ, ಕೃಷಿ ಉದ್ಯಮ ಬಗ್ಗೆ ವಿಚಾರಗೋಷ್ಟಿ ನಡೆಯಲಿದೆ.

ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸಲಿದ್ದು, ಡಾ. ಅವಿನಾಶ್ ಭಟ್, ಡಾ.ಚೇತನಾ, ನಿರಂಜನ ಸೇಮಿತ, ರಾಜೇಂದ್ರ ಕಲ್ಭಾವಿ, ಜೋ ಪ್ರದೀಪ್ ಡಿಸೋಜ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡುವರು. ಸಂಜೆ ೪.೩೦ ಕ್ಕೆ ಕರಾವಳಿ ದಫ್ ಸ್ಪರ್ಧೆ ನಡೆಯಲಿದ್ದು, ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬಲ್ ಅವರು ಉದ್ಘಾಟಿಸಲಿರುವರು.
ಫೆ.೧೪ ರವಿವಾರ ಮಧ್ಯಾಹ್ನ ೨ ಗಂಟೆಗೆ ಕರಾವಳಿ ಸಗಮಪ ಸೀಸನ್-೨ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯ ಮೆಘಾ ಆಡಿಷನ್ ನಡೆಯಲಿದ್ದು, ಶ್ರೀ ಅನ್ನಪೂರ್ಣೆಶ್ವರಿ ದೇವಸ್ಥಾನದ ಪ್ರ. ಅರ್ಚಕ ಮಾದಕಟ್ಟೆ ಈಶ್ವರ ಭಟ್ ಉದ್ಘಾಟಿಸುವರು. ಸಂಜೆ ಸಭಾ ಕಾರ್ಯಕ್ರಮದಲ್ಲಿ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಅಧ್ಯಕ್ಷತೆ ವಹಿಸುವರು.

ಫೆ.೧೫ ರಂದು ಸೋಮವಾರ ಸಂಜೆ ೪ ಗಂಟೆಗೆ ಕರಾವಳಿ ಡ್ಯಾನ್ಸ್ ಕರಾವಳಿ  ರಾಜ್ಯ ಮಟ್ಟದ ಫಿಲ್ಮ್ ಡ್ಯಾನ್ಸ್  ಸ್ಪರ್ಧೆ ನಡೆಯಲಿದ್ದು, ಉಷಾ ಸಮೂಹ ಸಂಸ್ಥೆಯ ವಿಶ್ವನಾಥ ಬಂಟ್ವಾಳ ಅವರು ಉದ್ಘಾಟಿಸುವರು. ಸಂಜೆ ಸಭಾ ಕಾರ್ಯಕ್ರಮದಲ್ಲಿ ಕುಂದಾಪುರ ಉದ್ಯಮಿ ಸುದೀಶ್ ಅಧ್ಯಕ್ಷತೆ ವಹಿಸುವರು.ಫೆ.೧೬ರಂದು ಮಂಗಳವಾರ ಸಂಜೆ ೫ ಗಂಟೆಗೆ ನಾಟಕೋತ್ಸವ ಉದ್ಘಾಟನೆ ನಡೆಯಲಿದ್ದು, ಉದ್ಯಮಿ ನಾಗೇಂದ್ರ ಬಾಳಿಗಾ ಉದ್ಘಾಟಿಸುವರು. ಉದ್ಯಮಿ ವರದರಾಜ್ ಪೈ ಮಾವಿನಕಟ್ಟೆ ಅಧ್ಯಕ್ಷತೆ ವಹಿಸುವರು. ಅಂದು ಸತ್ಯ ದೇವತಾ ಕಲಾ ಆರ್ಟ್ಸ್ ಕನಪಾದೆ ತಂಡದಿಂದ ಗೋವಿಂದೆ ಗೊಬ್ಬಯೆ ಸ್ಪರ್ಧಾ ನಾಟಕ ನಡೆಯಲಿದೆ. ಫೆ.೧೭ರಂದು ಬುಧವಾರ ತಾಂಬೂಲ ಕಲಾವಿದರು ಪುಂಜಾಲಕಟ್ಟೆ ಯವರಿಂದ ಅರ್ಗಂಟ್, ಫೆ.೧೮. ಗುರುವಾರ ಕಲಾನಿಽ ಕಲಾವಿದರು ನಾವೂರು ಇವರಿಂದ ಬಲಿಪುಗನ, ಫೆ.೧೯ ಶುಕ್ರವಾರ ರಂಗ ಧರಣಿ ಕಲಾವಿದರು ಕಡೆಗೋಳಿ ಅವರಿಂದ ಗುರು, ಫೆ.೨೦ ಶನಿವಾರ ತೆಲಿಕೆದೆ ಕಲಾವಿದೆರ್‌ಕೊಯಿಲ ಅವರಿಂದ ಇನಿಮುಟ್ಟ ಇಂಚಾತಿಜಿ ಸ್ಪರ್ಧಾ ನಾಟಕ ನಡೆಯಲಿದೆ.

ಫೆ.೨೧ ರಂದು ರವಿವಾರ ಸಂಜೆ ಕರ್ನಾಟಕ ಸಿಂಗಾರಿ ಮೇಳ ಅಕಾಡೆಮಿ ಮಂಗಳೂರು ಇದರ ಆಶ್ರಯದಲ್ಲಿ ಚೆಂಡೆ ಕಲಾವಿದರ ಸಮಾವೇಶ, ಚೆಂಡೆ ವಿಚಾರ ಗೋಷ್ಠಿ, ಚೆಂಡೆ ಪ್ರದರ್ಶನ ನಡೆಯಲಿದೆ. ಫೆ.೨೨ ಸೋಮವಾರ ಸಂಜೆ ೪ ಕ್ಕೆ ರಂಗಭೂಮಿ ಕಲಾವಿದರ ಸಮಾವೇಶ ನಡೆಯಲಿದೆ. ಗಂಟೆ ೬ರಿಂದ ಮೋಕೆದ ಕಲಾವಿದರಿಂದ ಮೋಕೆಡ್ ಒಂತೆ ಜೋಕೆ ತುಳು ನಾಟಕ ಪ್ರದರ್ಶನವಿದೆ.

ಫೆ.೨೩ ರಂದು ಮಂಗಳವಾರ ಸಂಜೆ ೩ ಕ್ಕೆ ಕರಾವಳಿ ಸರಿಗಮಪ ಸೀಸನ್ ೨ ಇದರ ಸೆಮಿ ಪೈನಲ್  ಮತ್ತು ಫೈನಲ್ ನಡೆಯಲಿದೆ. ಫೆ.೨೪ ರಂದು ಸಂಜೆ ಗಂಟೆ ೫.೩೦ರಿಂದ ರಶೀದ್ ನಂದಾವರ ತಂಡದಿಂದ ಮಾಪುಲೆ ಪಾಟ್ಟ್ , ಗಂಟೆ ೭ ರಿಂದ ತಾಂಡವ ಡ್ಯಾನ್ಸ್ ಸ್ಟುಡಿಯೋ ಅವರಿಂದ ಫಿಲ್ಮ್ ಡ್ಯಾನ್ಸ್ ನಡೆಯಲಿದೆ. ಫೆ.೨೫ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಕೃಷಿ ಉತ್ಸವ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಪ್ರಶಸ್ತಿ ವಿತರಿಸುವರು. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು. ರಾತ್ರಿ ಮೋಕೆದ ಕಲಾವಿದರಿಂದ ತೆಲಿಪುವರಾ ಅತ್ತ್  ಬುಲಿಪುವರಾ ತುಳು ನಾಟಕ ಪ್ರದರ್ಶನವಿದೆ.

By Suddi9

Leave a Reply

Your email address will not be published. Required fields are marked *