ಬಂಟ್ವಾಳ : ಬಂಟ್ವಾಳ ತಾಲೂಕು  ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಹಾಗೂ ವರ್ಷಾವಽ ಜಾತ್ರೆ ಫೆ.೬ರಿಂದ ಫೆ.೮ ರ ವರೆಗೆ ವಿವಿಧ ವೈದಿಕ , ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.0402pkt1(Pangalpadi Devaru)

ಫೆ.೬ರಂದು ಬೆಳಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಇದರ ವತಿಯಿಂದ ೪೩ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಸಂಜೆ ಪಡುಸವಾರಿ, ಕಟ್ಟೆಪೂಜೆ,ದೇವರ ಉತ್ಸವ, ಮಹಾಪೂಜೆ, ನಿತ್ಯಬಲಿ, ರಾತ್ರಿ ಶಾಲಾ ಹಾಗೂ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಮತ್ತು ಸಹನಾ ಶೆಟ್ಟಿ ಅವರಿಂದ ಭರತನಾಟ್ಯ  ಕಾರ್ಯಕ್ರಮ ನಡೆಯಲಿದೆ.

 ಫೆ.೭ರಂದು ಬೆಳಗ್ಗೆ ದರ್ಶನೋತ್ಸವ,ಬಟ್ಟಲು ಕಾಣಿಕೆ ನಡೆಯಲಿದೆ.ಸಂಜೆ ಮೂಡು ಸವಾರಿ, ಕಟ್ಟೆಪೂಜೆ,ದೇವರ ಉತ್ಸವ, ಶ್ರೀ ಭೂತ ಬಲಿ, ಕವಾಟ ಬಂಧನ,ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆ.೮ರಂದು ಬೆಳಗ್ಗೆ ವಿಷ್ಣುಯಾಗ,ತುಲಾಭಾರ ಸೇವೆ,ಚೂರ್ಣೋತ್ಸವ ನಡೆಯಲಿದೆ. ರಾತ್ರಿ ಶ್ರೀ ದೇವರ ಮಹೋತ್ಸವ, ದೈವಗಳ ಗಗ್ಗರ ಸೇವೆ, ದೇವರ ಹಾಗೂ ದೈವಗಳ ಭೇಟಿ, ಓಕುಳಿ ಉತ್ಸವ, ಅವಭೃತ ಸ್ನಾನ ನಡೆಯಲಿದೆ. ರಾತ್ರಿ ಧಾರ್ಮಿಕ ಸಭೆಯಲ್ಲಿ ಪ್ರತಿಭಾ ಪುರಸ್ಕಾರ, ನಾರಾಯಣ ನಾಯಕ್ ಕರ್ಪೆ ಅವರಿಗೆ ವಿಷ್ಣು ಪ್ರಸಾದ ಪ್ರಶಸ್ತಿ ಪ್ರದಾನ ನಡೆಯಲಿದೆ. ನಾಟ್ಯ ವೈಭವ,ನೃತ್ಯ ವೈವಿಧ್ಯ,ಕದಂಬ ಕೌಶಿಕೆ ಯಕ್ಷಗಾನ  ನಡೆಯಲಿದೆ.ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *