ಬಂಟ್ವಾಳ:ಕೇಂದ್ರ ಮತ್ತು ರಾಜ್ಯ ಸರ್ಕಾರವು ಏಕಾಯೇಕಿ ಕೈಗೊಂಡಿರುವ ರೈತರು ಸಹಿತ ದಲಿತ ಮತ್ತು ಕಾರ್ಮಿಕ ಹಾಗೂ ಜನವಿರೋಧಿ ಮಸೂದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಹಸಿರು ಸೇನೆ ಮುಖಂಡ ರವಿಕಿರಣ್ ಪುಣಚ ಆಗ್ರಹಿಸಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಮಿನಿವಿಧಾನಸೌಧ ಎದುರು ರೈತ ಸಂಘ ಹಸಿರು ಸೇನೆ ವತಿಯಿಂದ ಶುಕ್ರವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಸಂಪತ್ತು ಕೆಲವು ಕಾರ್ಪೊರೇಟ್ ವ್ಯಕ್ತಿಗಳ ಸುಪರ್ದಿಗೆ ನೀಡುತ್ತಿದ್ದು, ಇದರಿಂದಾಗಿ ಉದ್ಯೋಗ ಕ್ಷಾಮ ತಲೆದೋರಲಿದೆ ಎಂದರು. ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡೀಸ್, ತಾಲ್ಲೂಕು ಸಮಿತಿ ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಮಾತನಾಡಿದರು. ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಪ್ರಮುಖರಾದ ರಾಯ್ ಕಾರ್ಲೋ, ಅಲ್ತಾಫ್ ತುಂಬೆ, ಶೇಖರ ಬಿ., ಸುರೇಶ್ ಕುಮಾರ್, ವೆಂಕಪ್ಪ ಪೂಜಾರಿ ಮತ್ತಿತರರು ಇದ್ದರು.
