ಮೂಡುಬಿದಿರೆ: ಕಳೆದ 15 ತಿಂಗಳಲ್ಲಿ 3 ಬಸದಿಗಳಲ್ಲಿ ಕಳ್ಳತನ ಸಹಿತ ಜ್ಯುವೆಲ್ಲರಿ ಹಾಗೂ ಇತರ ಕಳ್ಳತನಗಳಿಂದ ರೋಸಿ ಹೋಗಿರುವ ಮೂಡುಬಿದಿರೆಯಲ್ಲಿ ಬಹುಬೇಡಿಕೆಯ ಪೊಲೀಸ್ ಔಟ್ ಪೋಸ್ಟ್ ಸ್ಥಾಪಿಸುವ ಪ್ರಸ್ತಾವನೆ ಚುರುಕುಗೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವರ್ಷಗಳ ಹಿಂದೆಯೇ, ಸಿದ್ಧಾಂತ ಮಂದಿರದ ಅತ್ಯಮೂಲ್ಯ ವಿಗ್ರಹಗಳ ಕಳ್ಳತನವಾದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಸಕರ್ಾರಕ್ಕೆ ಮೂಡುಬಿದರೆಯ ಜೈನಪೇಟೆಯಲ್ಲಿ ಔಟ್ ಪೋಸ್ಟ್ ಸ್ಥಾಪಿಸುವ ಪ್ರಸ್ತಾವನೆ ಕಳುಹಿಸಲಾಗಿದ್ದು, ಬಳಿಕ ಈ ಯೋಜನೆ ನೆನೆಗುದಿಯತ್ತ ಮುಖ ಮಾಡಿತ್ತು. ಸಿದ್ಧಾಂತದ ಮಂದಿರದ ಕಳ್ಳತನದ ಬಳಿಕ ಬಡಗಬಸದಿಯಲ್ಲಿ ನಡೆದ ಕಳ್ಳತನ ಪ್ರಕರಣ ಸಂದರ್ಭದಲ್ಲೂ ಭದ್ರತೆಯ ಪ್ರಶ್ನೆ ಕಾಡಿತ್ತು.
mbd_oct16_5 (1)

ಅಕ್ಟೋಬರ್ 7ರಂದು ಬೆಳಕಿಗೆ ಬಂದ ಹಿರೇ ಬಸದಿಯಲ್ಲಿನ ಕಳ್ಳತನದ ಬಳಿಕ ಬಸದಿ ಹಾಗೂ ಮೂಡುಬಿದರೆ ನಗರದ ಭದ್ರತೆಯ ದೃಷ್ಠಿಯಿಂದ ಔಟ್ಪೋಸ್ಟ್ ಸ್ಥಾಪಿಸುವ ಪ್ರಸ್ತಾವನೆ ಚುರುಕುಗೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮೀನುಗಾರಿಕ ಸಚಿವ, ಮೂಡುಬಿದರೆ ಶಾಸಕ ಅಭಯಚಂದ್ರ ಜೈನ್ ಅವರು ಈ ಬಗ್ಗೆ ಉತ್ಸುಕರಾಗಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಅಭಯಚಂದ್ರ ಜೈನ್ ಔಟ್ಪೋಸ್ಟ್ ವಿಚಾರದಲ್ಲಿ ಮೂಡುಬಿದರೆ ಜೈನ ಸ್ವಾಮೀಜಿ ಜತೆ ಚಚರ್ಿಸಿದ್ದಾರೆ. ಔಟ್ ಪೋಸ್ಟ್ಗೆ ಕೋಣೆ ಹಾಗೂ ಊಟದ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿರುವ ಜೈನಮಠ ಔಟ್ ಪೋಸ್ಟ್ಗೆ ಸೂಕ್ತ ಜಾಗವನ್ನು ನೀಡಲು ಮುಂದಾಗಿದೆ.

ಜೈನ ಮಠದ ಎದುರಿರುವ ಹಳೆಯ ಛತ್ರದ ಒಂದು ಕೋಣೆ, ಇಲ್ಲವೆ ಗುರುಬಸದಿಯ ಆವರಣದಲ್ಲಿ ಔಟ್ಪೋಸ್ಟ್ ನಿಮರ್ಿಸಲು ಜಾಗದ ವ್ಯವಸ್ಥೆಯಿದೆ. ಈ ಬಗ್ಗೆ ಸಚಿವರು, ಪೊಲೀಸ್ ಅಧಿಕಾರಿಗಳು ಹಾಗೂ ಜೈನ ಸಮುದಾಯದವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದ್ದೇನೆ. 15 ದಿನದೊಳಗೆ ಔಟ್ಪೋಸ್ಟ್ ಪ್ರಸ್ತಾವನೆಯು ಯಾವ ಹಂತದಲ್ಲಿದೆ ಎನ್ನುವ ಸ್ಪಷ್ಟ ಚಿತ್ರಣ ಲಭ್ಯವಾಗುತ್ತದೆ. ಬಸದಿ ಹಾಗೂ ಮೂಡುಬಿದರೆ ಭದ್ರತೆಗೆ ಜೈನ ಮಠದಿಂದ ನಮ್ಮ ಮಿತಿಯಲ್ಲಿ ಸಹಕಾರ ನೀಡಲು ತಯಾರಿದ್ದೇವೆ ಎಂದು ಮೂಡುಬಿದರೆ ಜೈನ ಮಠದ ಭಟ್ಟಾರಕ ಚಾರುಕೀತರ್ಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸರು ಅಗತ್ಯ:
ಔಟ್ ಪೋಸ್ಟ್ ನಿಮರ್ಾಣಕ್ಕೆ ಹೆಚ್ಚುವರಿ ಪೊಲೀಸರ ಅಗತ್ಯತೆಗಳಿವೆ. 1 ಎಎಸ್ಐ, 4 ಹೆಡ್ ಕಾನ್ಸ್ಟೇಬಲ್ ಸಹಿತ 5ಕ್ಕೂ ಹೆಚ್ಚಿನ ಪೊಲೀಸರ ಬೇಕಾಗುತ್ತಾರೆ. ಈಗಾಗಲೇ ಜೈನ ಪೇಟೆಯಲ್ಲಿ ಗಸ್ತು ತಿರುಗುವುದನ್ನು ಚುರುಗೊಳಿಸಿದ್ದೇವೆ. ಜೈನಪೇಟೆಯಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು, ಚೆಕ್ ಪಾಯಿಂಟ್ ಮೂಲಕ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
* ಯಶೋಧರ.ವಿ.ಬಂಗೇರ

By suddi9

Leave a Reply

Your email address will not be published. Required fields are marked *