ಕುಂದಾಪುರ: ಕುಮಟಾದ ಕಾಲೇಜಿನ ಮೂರನೇ ಬಿ.ಕಾಂ ವಿದ್ಯಾಥರ್ಿಯಾಗಿದ್ದು, ರಾಷ್ಟ್ರದ್ರೋಹ ಹಾಗೂ ಒಳಸಂಚು, ರಾಷ್ಟ್ರಗೀತೆಗೆ ಅವಮಾನ ಹಾಗೂ ರಾಷ್ಟ್ರದ ವಿರುದ್ಧ ಕೀಳು ಪದದ ಪ್ರಯೋಗ ಇತ್ಯಾದಿ ಆರೋಗಳಿಗಾಗಿ ಕುಮಟಾದ ಪೊಲೀಶರಿಂದ ಬಂಧಿತನಾದ 19ವರ್ಷ ಪ್ರಾಯದ ಜಬೀರ್ಖಾನ್ನಿಗೆ ಕಾರವಾರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶರ್ತಬದ್ಧ ಜಾಮೀನು ನೀಡಿದೆ.
ಆರೋಪಿಯು ಆ.15ರಂದು ಸ್ವಾತಂತ್ರಿ ದಿನಾಚರಣೆಯ ದಿನ ವಿಡಿಯೋ ಹಾಗೂ ಎಸ್.ಎಂ.ಎಸ್.ಕಳುಹಿಸಿ ಅಪರಾಧ ಮಾಡಿರುವುದಾಗಿ ಆತನ ಸಹಪಾಠಿ ರಕ್ಷಿತ್ ಜೋಗಿ ದೂರು ನೀಡಿದ್ದರು. ಕುಮಟಾದ ಪರಿಸರದಲ್ಲಿ ಭೀತಿ ವಾತಾವರಣ ಸೃಷ್ಟಿಸಿದ ಹಾಗೂ ರಾಷ್ಟ್ರದ ಗಮನ ಸೆಳೆದ ಈ ಪ್ರಕರಣದಲ್ಲಿ ಆರೋಪಿ ಪರವಾಗಿ ವಕಾಲತ್ತು ನಡೆಸಲು ಕುಮಟಾ ವಕೀಲರ ಸಂಘ ಹಿಂದೇಟು ಹಾಕಿತ್ತು. ಆರೋಪಿಯು ಪ್ರತಿಭಾವಂತ ವಿದ್ಯಾಥರ್ಿಯಾಗಿದ್ದು, ಭಯೋತ್ಪಾಕನಲ್ಲ ಹಾಗೂ ಆತನಿಂದ ದೊಡ್ಡ ಅಪರಾಧ ಘಟಿಸುವ ಸಾಧ್ಯತೆ ಇಲ್ಲ ಎಂದು ಆರೋಪಿಯ ಪರ ವಾದ ಮಂಡಿಸಲಾಗಿತ್ತು. ಕಾರವಾರದ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಡಿ8.ಆರ್.ರೇಣಕೆ ಅವರು ಜಾಮೀನು ಆದೇಶಿಸಿದ ಈ ಪ್ರಕರಣದಲ್ಲಿ ಆರೋಪಿ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುಡ್ಸೇಶ್ವರ ವಾದಿಸಿದ್ದರು.
