ಕೈಕಂಬ : ಪೊಳಲಿಗೆ ಸಮೀಪದ ಸೂರ್ಲ ಮಣಿಕಂಠಪುರದಲ್ಲಿರುವ ಶ್ರೀ ಶಾಸ್ತ ನಿಲಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಸತ್ಸಂಗ-ಸಂರ್ಕೀರ್ತನೆಯನ್ನು ನಡೆಸಿದರು. 
ಇದೇ ವೇಳೆ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆ, ನಾಗಾತಂಬಿಳ ವನ್ನು ಕಾರ್ಕಳ ಪ್ರಸಾದ್ ಭಟ್ ನೆರವೇರಿಸಿದರು. ಮಣಿಕಂಠ ಭಜನಾ ಮಂದಿರದಲ್ಲಿ ಮಕರ ಉತ್ಸವ ಆಚರಿಸಲಾಯಿತು.
