ಕೈಕಂಬ : ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನಕ್ಕೆ ಕೆತ್ತಿಕಲ್‌ನಲ್ಲಿ ಜೈ ಶಂಕರ್ ಮಿತ್ರ ಮಂಡಳಿ ನಿರ್ಮಿಸಿದ ನೂತನ ಮಹಾದ್ವಾರ ಹಾಗೂ ಅದರ ಪಕ್ಕದಲ್ಲೇ ನಿರ್ಮಿಸಲಾದ ಬಸ್ ತಂಗುದಾಣವನ್ನು ಗುರುವಾರ(ಜ. ೧೪) ಅಮೃತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಭಟ್ ಹಾಗೂ ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ ಉದ್ಘಾಟಿಸಿದರು.gur-jan-14-dwara-1

ಶ್ರೀ ಅಮೃತೇಶ್ವರ ದೇವರ ಸನ್ನಿಧಾನಕ್ಕೆ ತೆರಳುವ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ಮಹಾದ್ವಾರ ಉತ್ತಮವಾಗಿದ್ದು, ದೈವೀ ಸಂಕಲ್ಪದAತೆ ಮಕರ ಸಂಕ್ರಾತಿಯAದು ಉದ್ಘಾಟನೆಗೊಳ್ಳುತ್ತಿದೆ. ಇದರ ನಿರ್ಮಾಣ ಶಕ್ತಿಯಾದ ಜೈ ಶಂಕರ್ ಮಿತ್ರ ಮಂಡಳಿಯ ಸದಸ್ಯರಿಗೆ ಶ್ರೀ ದೇವರು ಒಳ್ಳೆಯದು ಮಾಡಲಿ ಎಂದು ಕುಡುಪು ದೇವಸ್ಥಾನದ ಕೃಷ್ಣರಾಜ ತಂತ್ರಿ ಹೇಳಿದರು.gur-jan-14-dwara-5

ಅಧ್ಯಕ್ಷತೆ ವಹಿಸಿದ ಮೇಯರ್ ದಿವಾಕರ ಪಾಂಡೇಶ್ವರ ಮಾತನಾಡಿ, ಜೈ ಶಂಕರ್ ಮಿತ್ರ ಮಂಡಳಿಯ ಈ ಕೆಲಸ ಇತರ ಸಂಘ-ಸAಸ್ಥೆಯವರಿಗೆ ಮಾದರಿ ಎಂದರು.

gur-jan-14-dwara-4ಉದ್ಘಾಟನಾ ಸಮಾರಂಭದಲ್ಲಿ ಉಪ-ಮೇಯರ್ ವೇದಾವತಿ, ಬಿಜೆಪಿ ವಕ್ತಾರ ಜಗದೀಶ ಶೇಣವ, ಕಾರ್ಪೊರೇಟರ್‌ಗಳಾದ ಹೇಮಲತಾ ಆರ್ ಸಾಲ್ಯಾನ್, ಕೆ ಭಾಸ್ಕರ ಮೊÊಲಿ, ಸುದೇಶ ಶೆಟ್ಟಿ ಬಿಜೈ ಹಾಗೂ ಉದ್ಯಮಿ ರಾಘು ಸಾಲ್ಯಾನ್, ಓಂ ಪ್ರಕಾಶ್ ಶೆಟ್ಟಿ, ಚಂದ್ರಹಾಸ್ ರೈ, ದಿನೇಶ್ ಜೆ ಕರ್ಕೇರ, ಸಿವೇಜ್ ಕಂಪೆನಿ ಅಧಿಕಾರಿ ಡಾ. ರೇಷ್ಮಾ, ಮಂಡಳಿಯ ಗೌರವಾಧ್ಯಕ್ಷ ಗಂಗಯ್ಯ ಅಮೀನ್, ಅಧ್ಯಕ್ಷ ದಿವಾಕರ ಆಚಾರ್ಯ,  ಬಾಲಕೃಷ್ಣ ಭಟ್, ಶ್ರೀಹರಿ ಭಟ್, ಮೋಹನದಾಸ್ ಶೆಟ್ಟಿ, ಡಾ. ದಯಾಕರ ಪೂಂಜ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

ದಾನಿಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಮೋಹನದಾಸ್ ಸ್ವಾಗತಿಸಿದರೆ, ಪ್ರಸ್ತಾವಿಕ ಮಾತನ್ನಾಡಿದ ಮನೋಜ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *