ಗುರುಪುರ : ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಬಡಾಯಿ ಕೊಚ್ಚುವ ರೀತಿಯಲ್ಲಿ ಕಾಂಗ್ರೆಸ್‍ಗೆ ಸೋಲಾಗಿಲ್ಲ. ಆಡಳಿತದಲ್ಲಿರುವ ಬಿಜೆಪಿ ಈ ಚುನಾವಣೆಯ ಮೂಲಕವೂ ಸಾಕಷ್ಟು ಜನಬೆಂಬಲ ಕಳೆದುಕೊಂಡಿದೆ. ಮುಂದೆ ನಡೆಯಲಿರುವ ಜಿಂಪಂ/ತಾಪಂ ಚುನಾವಣೆಯಲ್ಲಿ ಬಿಜೆಪಿಗೆ ಊಹಿಸಲಾರದಷ್ಟು ಮುಖಭಂಗವಾಗಲಿದೆ ಎಂದು ಮಾಜಿ ಶಾಸಕ ಮೊಗೈದಿನ್ ಬಾವ ಹೇಳಿದರು.

ಗುರುಪುರ ಗ್ರಾಪಂನಲ್ಲಿ ಮೇಲುಗೈ ಸಾಧಿಸಿರುವ ಕಾಂಗ್ರೆಸ್ ಬೆಂಬಲಿತ 12 ಸದಸ್ಯರಿಗೆ ಕೈಕಂಬದ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಲಾದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ನಮ್ಮ ವೈಫಲ್ಯಗಳನ್ನು ಸರಿಪಡಿಸುವ. ಜನರ ಕಷ್ಟ-ಸುಖಗಳಲ್ಲಿ ಎಂದಿನಂತೆ ಭಾಗಿಯಾಗೋಣ. ನಮಗೂ ಒಳ್ಳೆಯ ದಿನ ಬರಲಿದೆ. ಸೋತ ಅಭ್ಯರ್ಥಿಗಳು ಮಂಕಾಗುವ ಅಗತ್ಯವಿಲ್ಲ. ಒಗ್ಗಟ್ಟು ಕಾಪಾಡಿಕೊಂಡು ಎಲ್ಲರೂ ಪಕ್ಷ ಬಲವರ್ಧನೆಗೆ ಶ್ರಮಿಸೋಣ ಎಂದರು.
ಗುರುಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಮಲ್ಲಿ ಕಾರ್ಯಕ್ರಮ ನಿರೂಪಿಸಿದರು. ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಗ್ರಾಪಂ ನೂತನ ಸದಸ್ಯರೂ ಆಗಿರುವ ತಾಪಂ ಸದಸ್ಯ ಸಚಿನ್ ಅಡಪ, ಸದಾಶಿವ ಶೆಟ್ಟಿ ಕೆ, ಜಿ. ಎಂ ಉದಯ ಭಟ್, ಯಶವಂತ ಶೆಟ್ಟಿ, ದಾವೂದ್, ಎ ಕೆ ಅಶ್ರಫ್, ಬಾಲಕೃಷ್ಣ ಪೂಜಾರಿ, ಸಂಪಾ, ಚಂದ್ರಾವತಿ, ಶೋಭಾ ಅಶೋಕ್, ಎಡ್ಲಿನ್ ಕ್ಲೀಟಾ ಡಿ’ಸೋಜ, ಬಬಿತಾ ಹಾಗೂ ಸೋತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಎಲ್ಲರನ್ನೂ ಶಾಲು ಹೊದಿಸಿ ಗೌರವಿಸಲಾಯಿತು
