ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ನಂತರ ದೇಗುಲದ ಸಾನಿಧ್ಯದಲ್ಲಿ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದ್ದು ದೃಢಕಲಶ ಆಗಬೇಕಾಗಿರುವುದರಿಂದ ಡಿ. ೨೮ ರಿಂದ ಫೆ.೧೭ರವರೆಗೆ ಭಕ್ತಾಧಿಗಳಿಗೆ ದೇವರ ದರ್ಶನವಿರುವುದಿಲ್ಲ. ಆ ಪ್ರಯುಕ್ತ ದೇವಸ್ಥಾನದಲ್ಲಿ ಡಿ. ೨೫ರಿಂದ ಡಿ.೨೮ರವರೆಗೆ ವಿವಿಧ ಪೂಜೆಗಳು ನಡೆಯಲಿದ್ದು ಶುಕ್ರವಾರ ೧೨ ತೆಂಗಿನಕಾಯಿಯ ಗಣಹೋಮ, ಸಂಜೀವಿನಿ ಮೃತ್ಯುಂಜಯ ಹೋಮ, ನವಗ್ರಹಶಾಂತಿ ಹೋಮ ಪೂಜೆಯು ದೇವಳದ ತಂತ್ರಿ ಸುಬ್ರಹಣ್ಯ ಅವರ ನೇತೃತ್ವದಲ್ಲಿ ನೆರವೇರಿತು.
ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ. ರಾಮ್ ಭಟ್ ಪರಮೇಶ್ವರ ಭಟ್ ಹಾಗು ಸಿಬ್ಬಂದಿಗಳ ಸಹಯೋಗದೊಂದಿಗೆ ಪೂಜಾವಿಧಿ ವಿಧಾನಗಳು ನಡೆಯಿತು. ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ಯು.ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ದೇವಳ ಕರ್ಯನಿರ್ವಹಣಾಧಿಕಾರಿ ಜಯಮ್ಮ ಉಪಸ್ಥಿತರಿದ್ದರು.
