ಪೊಳಲಿ: ದಿನಾಂಕ 20 12 2020 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಒರಿಯರ್ದೊರಿ ಅಸಲ್ ತುಳು ನಾಟಕದ ಮುಹೂರ್ತ ನಡೆಯಿತು.ಬಳಿಕ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ನಡೆದ ಸರಳ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ನಾಟಕ ರಚನೆಕಾರ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ರವರು ಮಾತನಾಡುತ್ತಾ,  “ಅಸಲ್” ನಾಟಕದ ಸಂಭಾಷಣೆಗಳನ್ನು ಮೆಲುಕು ಹಾಕುತ್ತಾ ಖುಷಿ ಪಡುತ್ತಿರುವ ಇಂದಿನ ಯುವಜನತೆಗೆ ಮತ್ತೆ ಒರಿಯರ್ದೊರಿ ಅಸಲ್ ನಾಟಕವನ್ನು 30 ವರ್ಷಗಳ ನಂತರ ಹೆಸರಾಂತ ನಾಟಕ ತಂಡ ವಿಧಾತ್ರೀ ಕಲಾವಿದೆರ್  ಕೈಕಂಬದಿಂದ ಹೊರ ತರುತ್ತಿದ್ದು, ತುಳು ರಂಗ ಭೂಮಿಯಲ್ಲಿ ಇತಿಹಾಸ ಸೃಷ್ಟಿಸಿ, ದಾಖಲೆ ಬರೆದ ಈ ನಾಟಕವು ಮತ್ತೆ ಹೊಸ ಶಖೆಯನ್ನು ಸೃಷ್ಟಿಸುವುದರಲ್ಲಿ ಸಂಶಯವಿಲ್ಲ ಎಂದರು
IMG_20201221_140958
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲಾವಿದ ಸುಂದರ ರೈ ಮಂದಾರರವರು ಮಾತನಾಡುತ್ತಾ, ಈ ನಾಟಕವು ವಿಧಾತ್ರೀ ತಂಡದ  ಪ್ರಬುದ್ಧ ಕಲಾವಿದರಿಂದ ಮತ್ತೊಮ್ಮೆ ದಾಖಲೆ ನಿರ್ಮಿಸಲಿದೆ ಎಂದರು. ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಪಮ್ಮಿ ಕೊಡಿಯಾಲ್ ಬೈಲ್ ಮಾತನಾಡುತ್ತಾ,  ಕಲಾಸಂಗಮದಲ್ಲಿ  ಮೂವತ್ತೈದು ವರ್ಷಗಳ ಹಿಂದೆ ನಿರ್ಮಾಣವಾದ ಚರಿತ್ರೆ, ವಿಧಾತ್ರೀಯ ಮೂಲಕ ಮರುಕಳಿಸಲಿದೆ ಎಂದರು.ಕಲಾವಿದ ನಿರೂಪಕ ಜಿ ಎ  ಬೋಳೂರು, ಸಿನಿಮಾ ನಿರ್ಮಾಪಕ ಶ್ರೀನಿವಾಸ್ ಶುಭಹಾರೈಸಿದರು. ನಾಗೇಶ್ ಪೊಳಲಿ, ಉದ್ಯಮಿ ಶ್ರೀನಿವಾಸಶೆಟ್ಟಿರವರು ಉಪಸ್ಥಿತರಿದ್ದರು. ಚಿದಾನಂದ ಅದ್ಯಪಾಡಿ ಸ್ವಾಗತಿಸಿದರು. ರಾಜೇಶ್ ಕಣ್ಣೂರು ವಂದಿಸಿದರು. ವರದರಾಜ್ ನೆತ್ತರಕೆರೆ ಧನ್ಯವಾದಗಳನ್ನು ಅರ್ಪಿಸಿದರು.

By suddi9

Leave a Reply

Your email address will not be published. Required fields are marked *