ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ವಯಕ್ತಿಕವಾಗಿ ಒಳ್ಳೆಯವರು,ಆದರೆ ಅವರ ಮಲತಾಯಿ ಧೋರಣೆಯಿಂದ ಬೇಸತ್ತ ಕಾಂಗ್ರೆಸ್ ಪಕ್ಷ ತೊರೆಯಬೇಕಾಯಿತು ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಮಾಜಿ ತಾಪಂ ಸದಸ್ಯ ಮಾಧವ ಮಾವೆ ಹೇಳಿದ್ದಾರೆ. ಗುರುವಾರ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮಾನಾಥ ರೈ ಯವರಿಗೆ ನಾನು ತಾಯಿಯ ಸ್ಥಾನ ನೀಡಿದ್ದೇನೆ, 2020 ದಶಂಬರ್ ಮಧ್ಯಾಹ್ನದ ವರೆಗೂ  ಪಕ್ಷ ದ್ರೋಹದ ಕೆಲಸ ಮಾಡಿರಲಿಲ್ಲ ಆದರೆ ಕಾಂಗ್ರೆಸ್ ನಾಯಕರ  ತುಳಿತದಿಂದ ಬೇಸತ್ತು ಪಕ್ಷ ಬಿಟ್ಟಿದ್ದೇನೆ ಎಂದರು.IMG-20201224-WA0091

ನಾಗರಾಜ ಶೆಟ್ಟಿಯವರ ಎದುರು ಸೋತಿದ್ದ ಸಂದರ್ಭ  ರಮಾನಾಥ  ರೈ  ಪರಿಚಯ ಆಗಿದ್ದು, ಬಳಿಕ ಅನೇಕ ಜವಬ್ದಾರಿಗಳನ್ನು  ನನಗೆ ನೀಡಿದ್ದರು. ರೈ ಯವರ ಜೊತೆ ಹೆಚ್ಚು ಆತ್ಮೀಯತೆಯಿಂದ ಇದ್ದೆವು, ನಂತರದ ಚುನಾವಣೆಯಲ್ಲಿ ರಮಾನಾಥ ರೈ ಗೆಲುವಿಗಾಗಿ ನಾವೂ ಶ್ರಮಿಸಿದ್ದೇನೆ ಎಂದರು.

ಕೊಳ್ನಾಡು ಕ್ಷೇತ್ರದ ಜಿ.ಪಂ.ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಾಗಿದ್ದೆ, ಆದರೆ ವೀರಕಂಭ ತಾ.ಪಂ.ಕ್ಷೇತ್ರಕ್ಕೆ ಅವಕಾಶ ಕೊಟ್ಟರು.  ಶಿಸ್ತಿನ ಸಿಪಾಯಿಯಂತೆ ಪಕ್ಷದ ಗೆಲುವಿಗೆ ದುಡಿದಿದ್ದೇನೆ. ಎಲ್ಲೂ ಅಧಿಕಾರದ ಅಪೇಕ್ಷೆ ಪಟ್ಟಿರಲಿಲ್ಲ,  ಜಿ.ಪಂ. ಚುನಾವಣೆಯಲ್ಲಿ ಕೊಳ್ನಾಡಿನಲ್ಲಿ‌ ಅವಕಾಶ ನೀಡದೆ, ಮಾಣಿ‌ ಜಿ.ಪಂ.ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ತಂದಿದ್ದರು. ಕಾರ್ಯಕರ್ತರ ಒತ್ತಡದ ಹಿನ್ನೆಲೆಯಲ್ಲಿ  ಮಂಜುಳಾ  ಮಾವೆಗೆ ಅವಕಾಶ ಕೊಡಲಾಗಿತ್ತು ಎಂದು ವಿವರಿಸಿದ ಮಾಧವ ಮಾವೆ ರೈ ಆಕಾಶದಷ್ಟು ಎತ್ತರದಲ್ಲಿದ್ದಾರೆ, ಅವರ ಬಗ್ಗೆ ಈಗಲೂ ಗೌರವವಿದ್ದು, ಒಂದಿನಿತು ತಪ್ಪು ಮಾತನಾಡುವುದಿಲ್ಲ ಎಂದರು.
ಪಕ್ಷದ ವಿಚಾರ,ಕ್ಷೇತ್ರದ ಅಭಿವೃದ್ದಿಗಾಗಿ ಅನುದಾನಕ್ಕೆ ಸಂಬಂಧಿಸಿ ಅವರ ಬಳಿ ಮಾತುಕತೆ ನಡೆಸಿದ್ದೇನೆಯೇ ಹೊರತು,ನನ್ನ ಖಾಸಗಿ ಉದ್ಯಮ, ವ್ಯವಹಾರಕ್ಕೆ ಸಂಬಂಧಿಸಿ ರಮಾನಾಥ ರೈ ಯವರಿಂದ  ಸಹಾಯ ಪಡೆದಿದ್ದರೆ, ಅವರು ಹೇಳಿದಂತೆ ಕೇಳುತ್ತೇನೆ ಎಂದು ನನ್ನ ಪುತ್ರಿಗೆ ಮೆಡಿಕಲ್  ಸೀಟ್ ಪಡೆಯುವುದಕ್ಕೆ ಸಹಕಾರ ಮಾಡಿದ್ದರು ಅದನ್ನು ತಾನು ಮರೆಯಲಾರೆ ಎಂದರು.

ನನ್ನನ್ನು ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷನನ್ನಾಗಿ ಮಾಡುತ್ತೇನೆಂದು ತಿಳಿಸಿದ್ದ ರೈ ಅವರು ವರ್ಷ ಕಳೆದರೂ ಅಧ್ಯಕ್ಷರಾಗಿ ಮಾಡಲಿಲ್ಲ ಶಾಸಕ ಖಾದರ್ ಮುತುವರ್ಜಿಯಲ್ಲಿ‌ ಅವಕಾಶ ಸಿಕ್ಕಿತ್ತಾದರೂ, ರೈಯವರಿಂದಾಗಿ ಅಧಿಕಾರ ಮಾತ್ರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ.ಇದರಿಂದ ಬೇಸರಗೊಂಡು ಲೋಕಸಭಾ ಚುನಾವಣೆಯ ಬಳಿಕದಿಂದ ನಾನು ಪಕ್ಷದ ಸಕ್ರೀಯ ರಾಜಕಾರಣದಿಂದ ದೂರ ಇದ್ದೆ ಎಂದ ಅವರು ಇಲ್ಲು ನನ್ನ ಗೌರವಕ್ಕೆ ಧಕ್ಕೆ ಬಂದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದಾಗಿ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು.

ಬಂಟ್ವಾಳ‌ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಿ.ಪಂ.ಸ್ಥಾನಕ್ಕೆ ಪಕ್ಕದ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯವರನ್ನು ತಂದು ಅಭ್ಯರ್ಥಿಯನ್ನಾಗಿಸುವುದು ಅಗತ್ಯವಿದೆಯೇ ಎಂದವರು  ಪ್ರಶ್ನಿಸಿದರು. ವೈಯುಕ್ತಿಕ ಗೌರವಕ್ಕೆ ಧಕ್ಕೆ ಬಂದಾಗ ಮನೆ ಮಕ್ಕಳು ಹೊರ ಬಂದ ಹಾಗೆ, ನಾನು ಕಾಂಗ್ರೇಸ್ ಪಕ್ಷದ ಮನೆಯಿಂದ ಹೊರಬಂದಿದ್ದೇನೆ. ಶಾಸಕ ರಾಜೇಶ್ ನಾಯ್ಕ್ ರವರ ರಾಜ ಧರ್ಮ ದ ಆಡಳಿತಕ್ಕೆ ಬೆಂಬಲ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದರು. ಮುಂದಿನ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ರನ್ನು 25-30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ಹಗಲು ರಾತ್ರಿ ದುಡಿಯುವುದು ನನ್ನ ಅಜೆಂಡಾ ಎಂದರು.
ಇದಕ್ಕು ಮುನ್ನ ಹಿರಿಯ ಕಾಂಗ್ರೇಸಿಗ ಬಾಲಕೃಷ್ಣ ಶೆಟ್ಟಿ ಅವರು ಶಾಸಕ ರಾಜೇಶ್ ನಾಯ್ಕ ಉಳಿಪಾಡಿಯವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಗೊಂಡರು.     
ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ,ಪ್ರ. ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ,ಡೊಂಬಯ್ಯ ಅರಳ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ,ಪ್ರಮುಖರಾದ ಕೇಶವ ದೈಪಿಲ, ರೊನಾಲ್ಡ್  ಡಿಸೋಜ,ವಸಂತ ಅಣ್ಣಳಿಕೆ, ಸುದರ್ಶನ್ ಬಜ, ಡಿ.ಕೆ.ಹಂಝ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *