ಬಂಟ್ವಾಳ: ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ, ನಿ.2019-20 ನೇ ಸಾಲಿನಲ್ಲಿ ಒಟ್ಟು 103 ಕೋಟಿ ವ್ಯವಹಾರ ನಡೆಸಿ, 30 ಲಕ್ಷ ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದರು. ಸಂಘದ 2019-2020 ನೇ ಸಾಲಿನ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು ಶೇಕಡಾ 97 ರಷ್ಟು ಸಾಲ ವಸೂಲಾತಿ ಮಾಡಲಾಗಿದೆ ಎಂದರು.
ಸಂಘದಲ್ಲಿ ರಾಸಾಯಿನಿಕ ಗೊಬ್ಬರ ಸೇರಿದಂತೆ ಸಾವಯವ ಗೊಬ್ಬರ ಹರಳಿಂಡಿ, ಬೇವಿನ ಹಿಂಡಿ ಕೂಡ ಮಾರಾಟಕ್ಕೆ ಲಭ್ಯವಿದ್ದು ಸಂಘದ ಸದಸ್ಯರು ಇದರ ಪ್ರಯೋಜನ ಪಡೆಯುವ ಮೂಲಕ ಸಂಘದ ಏಳಿಗೆಗೆ ಸಹಕಾರಿಯಾಗುವಂತೆ ವಿನಂತಿಸಿದರು .
ಸನ್ಮಾನ :
ಇದೇ ವೇಳೆ ಸಂಘದ ವತಿಯಿಂದ ಕಂಬಳ ಕ್ಷೇತ್ರದಲ್ಲಿ ಅತೀ ವೇಗದ ಓಟಕ್ಕೆ ಖ್ಯಾತಿಯಾಗಿರುವ ಕರ್ನಾಟಕ ಸರ್ಕಾರದಿಂದ “ಕ್ರೀಡಾ ರತ್ನ” ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಶೆಟ್ಟಿ ಹಕ್ಕೇರಿ ಹಾಗೂ ಭತ್ತ ಕೃಷಿ ಬೆಳೆಸುವಲ್ಲಿ ಬಂಟ್ವಾಳ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ದಾಮೋದರ ಶೆಣೈ ಕರ್ಪೆ ಇವರನ್ನು ಗೌರವಿಸಲಾಯಿತು.ಸಂಘದ ವ್ಯಾಪ್ತಿಯಲ್ಲಿ ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ವಾರ್ಷಿಕ ಪರೀಕ್ಷೆ ಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಸಂಘದ , ಉಪಾಧ್ಯಕ್ಷ ಸತೀಶ್ ಪೂಜಾರಿ ನಿರ್ದೇಶಕರಾದ ಪದ್ಮರಾಜ್ ಬಲ್ಲಾಳ್ , ಸಂದೇಶ ಶೆಟ್ಟಿ, ರಾಜೇಶ್ ಶೆಟ್ಟಿ, ಉಮೇಶ್ ಗೌಡ, ದಿನೇಶ್ ಪೂಜಾರಿ, ದೇವರಾಜ್ ಸಾಲಿಯಾನ್,ಜಾರಪ್ಪ ನಾಯ್ಕ,ವೀರಪ್ಪ ಪರವ, ಅರುಣ ಶೆಟ್ಟಿ,ಮಾಧವ ಶೆಟ್ಟಿಗಾರ್,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರತಿ ಶೆಟ್ಟಿ ಮಹಾಸಭೆಯ ವರದಿ ವಾಚಿಸಿ,ಲೆಕ್ಕ ಪತ್ರ ಮಂಡಿಸಿದರು. ನಿರ್ದೇಶಕಿ ಮಂದಾರತಿ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಲೆಕ್ಕಿಗ ಮಲ್ಲಿಕಾ ಕಾರ್ಯಕ್ರಮ ನಿರ್ವಹಿಸಿ, ನಿರ್ದೇಶಕ ಹರೀಶ್ ಆಚಾರ್ಯ ವಂದಿಸಿದರು.
