ಸುದ್ದಿ9ಮೂಡುಬಿದರೆ: ಗ್ರಾಮೀಣ ಬಾಲ ಪ್ರತಿಭೆಗಳಿಗಾಗಿ ಮಂಗಳೂರಿನ ಜ್ಞಾನಭಾರತಿ ಅಕಾಡೆಮಿ ಮಕ್ಕಳ ಕೂಟ ಸಂಸ್ಥೆ ಆಯೋಜಿಸಿರುವ ರಂಗ ಶಿಬಿರದಲ್ಲಿ `ತಾಳಮದ್ದಳೆ’ ಹಾಸ್ಯಮಯ ನಾಟಕದ ಮುಹೂರ್ತ ನೆರವೇರಿತು.
ಮಂಗಳೂರಿನ ಬಾಲಭಾರತಿ ಅಕಾಡೆಮಿಯ ನಿದರ್ೇಶಕ ಕೆ.ವಿ.ರಮಣ್ ನಿದರ್ೇಶನದಲ್ಲಿ ಮೂಡಿಬರಲಿರುವ ನಾಟಕದ ಶಿಬಿರ ಬೆಳುವಾಯಿಯ ಯಕ್ಷಗಾನ ಕಲಾವಿದ ದೇವಾನಂದ ಭಟ್ ಅವರ ನಿವಾಸದಲ್ಲಿ ನಡೆಯುತ್ತಿದೆ.
ಕಲಾವಿದ ಮಣಿ ಕೋಟೆಬಾಗಿಲು ರಂಗಸಜ್ಜಿಕೆ ನಿರ್ವಹಿಸಲಿದ್ದಾರೆ. ಮೂಡುಬಿದರೆಯ ಅಯನಾ ವಿ.ರಮಣ್, ಪ್ರಣೀತ್ ಶೆಟ್ಟಿ, ರಷಿತಾ ಶೆಟ್ಟಿ, ಬೆಳುವಾಯಿಯ ಶುಭಾಂಜನ, ವಿಜೇಶ್, ವೈಷ್ಣವಿ, ಕಾಂತಾವರದ ಸುಷ್ಮಿತಾ, ಶ್ರೀತಿಕಾ, ಕಾತರ್ಿಕ್, ಸುಜಿತ್ ದೇವಾಡಿಗ, ಕಡಂದಲೆಯ ಪ್ರದ್ಯುಮ್ನ ಮೂತರ್ಿ, ಪ್ರಹ್ಲಾದ್ ಮೂತರ್ಿ, ಇರುವೈಲಿನ ಪ್ರದ್ಯುಮ್ನ ಪೆಜತ್ತಾಯ, ಪ್ರಹ್ಲಾದ ಪೆಜತ್ತಾಯ ಮತ್ತಿತರ ಬಾಲಕಲಾವಿದರು ಅಭಿನಯಿಸಲಿದ್ದಾರೆ.
ಪೆರ್ಲ ಪಂಡಿತ, ಅಗ್ರಪಂಕ್ತಿಯ ಯಕ್ಷಗಾನ ಅರ್ಥಧಾರಿ ದಿ.ಪೆರ್ಲ ಕೃಷ್ಣ ಭಟ್ 1967 ರಲ್ಲಿ ರಚಿಸಿದ ಈ ನಾಟಕ, ಸಂಘಟನೆಯ ಕಷ್ಟ-ನಷ್ಟಗಳನ್ನು, ಕಲಾವಿದರ ಒಣಪ್ರತಿಷ್ಠೆಯ ವಿಡಂಬನೆಯನ್ನು ಮಾಡುತ್ತದೆ.
ಯಕ್ಷದೇವ ಮಿತ್ರ ಕಲಾ ಮಂಡಳಿಯ ಕಾರ್ಯಕ್ರಮ ಸರಣಿಯ ನಡುವೆ ನ.8. ರಂದು ಮಧ್ಯಾಹ್ನ 3.ಗಂಟೆಗೆ ಮೂಡುಬಿದರೆಯ ಪದ್ಮಾವತಿ ಕಲಾ ಮಂದಿರದಲ್ಲಿ ಚೊಚ್ಚಲ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

