ಬಂಟ್ವಾಳ : ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ೨೦೧೯-೨೦ ನೇ ಸಾಲಿನ ವಾರ್ಷಿಕ ಮಹಾಸಭೆಯು ವಾಮದಪದವು ಶ್ರೀ ಗಣೇಶ ಮಂದಿರ ಸಭಾಂಗಣದಲ್ಲಿ ಜರಗಿತು.ಸಂಘದ ಅಧ್ಯಕ್ಷ ಕಮಲ್ ಶೆಟ್ಟಿ ಬೊಳ್ಳಾಜೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ೨೦೧೮-೧೯ನೇ ಸಾಲಿನಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗಿದೆ, ಸಂಘವು ಪ್ರಸಕ್ತ ಸಾಲಿನಲ್ಲಿ ೪೨.೭೯ ಲಕ್ಷ ರೂ.ಲಾಭ ಗಳಿಸಿದ್ದು ಸಂಘದ ಸದಸ್ಯರಿಗೆ ಶೇ. ೧೦ ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.
ಸಂಘವು ೨,೬೮೭.೦೧ ಕೋಟಿ ರೂ. ವ್ಯವಹಾರ ನಡೆಸಿದ್ದು, ಪಾಲು ಬಂಡವಾಳ ೧೬೫ ಲ.ರೂ., ಠೇವಣಾತಿ ೧,೪೫೬.೯೯ಲ.ರೂ., ಕೇಂದ್ರ ಬ್ಯಾಂಕಿನ ಸಾಲಗಳು ೧,೦೬೯.೯೪ ಲ.ರೂ. ಹೊಂದಿದೆ ಎಂದರು. ಸಂಘದಲ್ಲಿ ೧೭೩ ಸ್ವಸಹಾಯ ಗುಂಪುಗಳಿದ್ದು ಅವುಗಳ ಒಟ್ಟು ಉಳಿತಾಯ ಮೊತ್ತ ೪೨.೭೮ಲ.ರೂ., ಸ್ವಸಹಾಯ ಗುಂಪುಗಳ ಸಾಲ ೩೯.೨೯ಲ.ರೂ., ಸದಸ್ಯರ ಹೊರಬಾಕಿ ಸಾಲ ೧,೫೬೧.೭೦ ಲ.ರೂ., ಸಾಲ ವಸೂಲಾತಿ ಶೇಕಡಾ ೯೬.೩೮, ಆಡಿಟ್ “ಎ” ವರ್ಗೀಕರಣ ಪಡೆದಿದೆ ಎಂದ ಅವರು ಸಂಘದಲ್ಲಿ ಕ್ಯಾಂಪ್ಕೋ ಸಹಭಾಗಿತ್ವದಲ್ಲಿ ವಾರದ ೬ ದಿನಗಳಲ್ಲಿ ಅಡಿಕೆ ಖರೀದಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯವ್ಯಾಪ್ತಿಗೆ ಒಳಪಟ್ಟ ರೈತ ಸದಸ್ಯರ ಮಕ್ಕಳಿಗೆ ೨೦೧೮-೧೯ನೇ ಸಾಲಿನ ಎಸೆಸ್ಸೆಲ್ಸಿ ಮತ್ತು ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಆದೇರೀತಿ ವಿಕಲ ಚೇತನ ಮಕ್ಕಳಿಗೆ ಪ್ರೋತ್ಸಾಹಧನ, ಸಂಘದ ಮರಣ ಹೊಂದಿದ ಸದಸ್ಯರಿಗೆ ಮರಣ ಸಾಂತ್ವನನಿಧಿಯನ್ನು ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ನಿರ್ದೇಶಕರುಗಳಾದ ಧರ್ಣಪ್ಪ ನಾಯ್ಕ, ಗೋಪಾಲಕೃಷ್ಣ ಚೌಟ, ಗೋಪಾಲಕೃಷ್ಣ ಶೆಟ್ಟಿ ವೆಂಕಟೇಶ ಭಟ್, ಸುದೀರ್ ಕುಮಾರ್, ಕೊರಗು, ವಿವೇಕಾನಂದ ಪೂಜಾರಿ, ಆಶಾ ಜಯರಾಮ ಶೆಟ್ಟಿ, ರೋಹಿಣಿ ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಬಿ.ಯಶೋದರ ಶೆಟ್ಟಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಸಿ.ಡಿಸೋಜ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ನಾಗರಾಜ ಶೆಟ್ಟಿ ವಂದಿಸಿದರು.
–
–

