ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತವು 2019-20ನೇ ಸಾಲಿನಲ್ಲಿ 40.27 ಲಕ್ಷ ನಿವ್ವಳ ಲಾಭ ಗಳಿಸಿದ್ದು,ಸದಸ್ಯರಿಗೆ ಶೇ.8 ಡಿವಿಡೆಂಡ್ ನ್ನು ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಬಿ.ತಿಳಿಸಿದರು. ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಭಾನುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 2.27 ಲಕ್ಷ ರೂ.ವ್ಯಾಪಾರ ವಹಿವಾಟಿನಲ್ಲು ಲಾಭ ಗಳಿಸಿದೆ ಎಂದರು.
ಬಂಟ್ವಾಳ ವ್ಯ. ಸೇ. ಸ. ನಿಯಮಿತವು 125 ಕೋಟಿ ವ್ಯವಹಾರ ನಡೆಸಿದ್ದು,24.43 ಕೋಟಿ ಠೇವಣಿ ಹೊಂದಿದೆ.23.15 ಕೋಟಿ ಸಾಲ ನೀಡಲಾಗಿದ್ದು,21.62 ಕೋಟಿ ಸಾಲ ಮರುಪಾವತಿಯಾಗಿದೆ ಎಂದು ವಿವರಿಸಿದ ಅವರು ಮುಂದಿನ ದಿನಗಳಲ್ಲಿ ರೈತ ಸದಸ್ಯರಿಗೆ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲ ಸೌಲಭ್ಯ ನೀಡುವುದು,ಕೃಷಿಯ ಜೊತೆಗೆ ಕೃಷಿಯೇತರ ಸಾಲ ನೀಡಿಕೆಗೆ ಮಹತ್ವ ನೀಡುವುದಲ್ಲದೆ ಮುಂದಿನ ಮಾರ್ಚ್ ಅಂತ್ಯದೊಳಗೆ ನಿರ್ಮಾಣ ಹಂತದಲ್ಲಿರುವ ಸಂಘದ ಸ್ವಂತಕಟ್ಟಡವನ್ನು ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಅಧ್ಯಕ್ಷ ಪದ್ಮನಾಭ ಅವರು ಭರವಸೆಯಿತ್ತರು.
ಇದೇವೇಳೆ ಸಂಘದ ಅಭಿವೃದ್ದಿಗೆ ಶ್ರಮಿಸಿರುವ ಮಾಜಿ ಅಧ್ಯಕ್ಷ ಜಿ.ಆನಂದ ಅವರ ನಿಧನಕ್ಕೆ ಮೌನ ಪ್ರಾರ್ಥನೆಯ ಮೂಲಕ ಶೃದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಉಪಾಧ್ಯಕ್ಷ ಕೆ.ಭವಾನಿಶಂಕರ್ ಅವರು ಜಿ.ಅನಂದ ಅವರಿಗೆ ನುಡಿನಮನ ಸಲ್ಲಿಸಿದರು.ನಿರ್ದೇಶಕರುಗಳಾದ ಎಂ.ಮಹಾಬಲ ಶೆಟ್ಟಿ, ರಾಮಚಂದ್ರ ಗೌಡ, ವಿಠಲಪೂಜಾರಿ ಪುಂಡಿಬೈಲು, ವಿದ್ಯಾವತಿ ಪ್ರಮೋದ್ ಕುಮಾರ್, ಎಂ.ಕರುಣೇಂದ್ರ ಪೂಜಾರಿ, ಎ.ಲಕ್ಮೀ ವಿ.ಪ್ರಭು, ಹರೀಶ್, ಬಿ.ಸದಾಶಿವ ಶೆಣೈ, ಮನೋಹರ ಮೂಲ್ಯ, ಕೆ.ಪ್ರಕಾಶ್ ,ಕೆ.ಎನ್. ಶೇಖರ್ ಉಪಸ್ಥಿತರಿದ್ದರು.
ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಯಪ್ರಕಾಶ್ ಕಾಮತ್ ಅವರು ವರದಿ ವಾಚಿಸಿ ,ಲೆಕ್ಕಪತ್ರ ಮಂಡಿಸಿದರು.ಲೆಕ್ಕಪಾಲೆ ನತಾಶ ವಂದಿಸಿದರು.ಸಂಘದ ನಾವೂರ ಶಾಖೆಯ ವ್ಯವಸ್ಥಾಪಕ ಹರೀಶ್ ಕಾಮಾಜೆ ಕಾರ್ಯಕ್ರಮ ನಿರೂಪಿಸಿದರು.


