ಬಂಟ್ವಾಳ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಬಂಟ್ವಾಳ ತಾಲೂಕು ಶಾಖೆಯ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯು ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾ. ಸರಕಾರಿ ನೌಕರರ ಸಂಘದ  ಕಚೇರಿಯಲ್ಲಿ ನಡೆದಿದ್ದು, ಸಂಘದ ಬಂಟ್ವಾಳ ಶಾಖೆಗೆ ಎಲ್ಲಾ ಪಧಾದಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು. ಕಾವಳಕಟ್ಟೆ ಸ. ಹಿ. ಪ್ರಾ. ಶಾಲೆಯ ದೈಹಿಕ ಶಿಕ್ಷಕ ಜಯರಾಮ್  ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.IMG-20201221-WA0025
ಉಪಾಧ್ಯಕ್ಷರಗಳಾಗಿ ಬ್ರಹ್ಮರಕೂಟ್ಲು ಶಾಲೆಯ ಶಿಕ್ಷಕಿ ಭಾರತಿ ಹಾಗೂ ಮಜಿ ಸ.ಹಿ.ಪ್ರಾ.ಶಾಲೆಯ ಮು.ಶಿಕ್ಷಕ  ನಾರಾಯಣ ಪೂಜಾರಿ  ಕಾರ್ಯದರ್ಶಿಯಾಗಿ  ಕುದ್ದುಪದವು ಉದಯಗಿರಿ  ಸ.ಹಿ.ಪ್ರಾ. ಶಾಲೆಯ ಸ.ಹಿ.  ಯತೀಶ್ ಪಿ., ಖಜಾಂಚಿಯಾಗಿ ಮೂಡುಪಡುಕೋಡಿ ಸ ಹಿ ಪ್ರಾ ಶಾಲೆಯ ಸ ಶಿ ಸುನಿಲ್ ಸಿಕ್ವೆರಾ, ಜೊತೆ ಕಾರ್ಯದರ್ಶಿಗಳಾಗಿ ಇರಾ ಸ ಹಿ ಪ್ರಾ ಶಾಲೆಯ ದೈ.ಶಿ.ಶಿಕ್ಷಕಿ  ಶಶಿ ಬಿ.   ಮತ್ತು ಪೆರಾಜೆ ಸ.ಹಿ.ಪ್ರಾ.ಶಾಲೆಯ ಮು. ಶಿ.  ಪುಟ್ಟರಂಗನಾಥ್ ,  ಸಂಘಟನಾ ಕಾರ್ಯದರ್ಶಿಗಳಾಗಿ  ಸಜೀಪಮೂಡ  ಸ.ಹಿ ಪ್ರಾ ಶಾಲೆಯ ದೈ.ಶಿ.ಶಿಕ್ಷಕಿ ಮಮತಾ ,  ದೇವರಾಜ್ ಎಸ್ .ಕೆ ಆಯ್ಕೆಯಾದರು.
  ತಾಲೂಕು  ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಟಿ.ಶೇಷಪ್ಪ ಮಾಸ್ಟರ್  ಆಯ್ಕೆ ಪ್ರಮಾಣ ಪತ್ರ ವಿತರಿಸಿದರು.ಸಹಾಯಕ ಚುನಾವಣಾಧಿಕಾರಿ ಬಾಬು ಮಾಸ್ಟರ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ್ ರೈ, ಹಾಲಿ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್, ಸ. ನೌ. ಸಂಘದ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *