ಕೈಕಂಬ: ಶ್ರೀ ಕೋಡ್ದಬ್ಬು – ತನ್ನಿಮಾನಿಗ, ಪಂಜುರ್ಲಿ – ಗುಳಿಗ ಮತ್ತು ರಾಹು ದೈವಗಳ ಪನರ್ ಪ್ರತಿಷ್ಠೆ ಮತ್ತು ಪಂಚವಿಂಶತಿ ಕುಂಭಾಬಿಷೇಕದ ಬಗ್ಗೆ ಪೂರ್ವ ಭಾವಿ ಸಭೆಯು ಗುರುಪುರ- ಕೈಕಂಬ ಶ್ರೀ ಕೋಡ್ದಬ್ಬು ದೈವಸ್ಥಾನ ಕಂದಾವರ ಪದವಿನಲ್ಲಿ ಭಾನುವಾರ ನಡೆಯಿತು.vp3

ಫೆ ೧೭ರಂದು ನಡೆಯಲಿರುವ ದೈವಗಳ ಪನರ್ ಪ್ರತಿಷ್ಠೆ ಮತ್ತು ಪಂಚವಿಂಶತಿ ಕುಂಭಾಭಿಷೇಕದ ವಿವರಣೆಯನ್ನು ಲಕ್ಷ್ಮೀನಾರಾಯಣ ಉಡುಪರವರು ನೀಡಿದರು. ಏಳು ದಿನಗಳಲ್ಲಿ ನಿರಂತರವಾಗಿ ನಡೆಯುವ ಕಾರ್ಯಗಳು ಮತ್ತು ಕಾರ್ಯವಿಧಾನಗಳ ಬಗ್ಗೆ ಹೊರೆಕಾಣಿಕೆ ಆದಿಯಾಗಿ ದೈವಗಳ ನೇಮೋತ್ಸವದ ವರೆಗೆ ಸಮಗ್ರ ವಿವರಣೆಯನ್ನು ಜೀಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕಿರಣ್ ಪಕಳ ನೀಡಿದರು.vp2

ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ರಾಜೀವ ವಹಿಸಿದ್ದರು. ವೇದಿಕೆಯಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ವಿನೋದ್ ಮಾಡ, ಹರೀಶ್ ಮಟ್ಟಿ, ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ.ಹರೀಶ್, ಸದಾಶಿವ ಕರ್ಕೇರ ಕಾಜಿಲ ಹಾಗೂ ವೆಂಕಪ್ಪ ಗುರಿಕಾರರವರು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ಸ್ವಾಗತಿಸಿ ಶಶಿಕಾಂತ್ ಸಿ.ಎಚ್ ವಂದಿಸಿ ಭರತ್ ಎಸ್.ಕರ್ಕೇರರವರು ಕಾರ್ಯಕ್ರಮ ನಿರೂಪಿಸಿದರು.vp5

vp4IMG_0371

By suddi9

Leave a Reply

Your email address will not be published. Required fields are marked *