ಕಣ್ಣೂರು: ಕಾಸರಗೋಡಿನ ಕಣ್ಣೂರಿನಲ್ಲಿ ಮತ್ತೆ ರಾಜಕೀಯ ದ್ವೇಷ ಭುಗಿಲೆದ್ದಿದೆ. ಸಿಪಿಐಎಂ ಹಾಗೂ ಬಿಜೆಪಿ ಸ್ಥಳೀಯ ನಾಯಕರ ಮನೆಗೆ ನಾಡಬಾಂಬ್ ಎಸೆದಿರುವ ದುಷ್ಕಮರ್ಿಗಳು ಕ್ರೌರ್ಯವನ್ನು ಮೆರೆದಿದ್ದಾರೆ. ಗುರುವಾರ ಮುಂಜಾನೆಯಿಂದ ನಡೆಯುತ್ತಿರುವ ದಾಳಿ-ಪ್ರತಿದಾಳಿಗಳಿಂದ ಜನರು ತತ್ತರಿಸಿದ್ದು ಗಭರ್ಿಣಿ ಸಹಿತ ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಣ್ಣೂರು ಚಕ್ಕಾರಕ್ಕಾಲ್ ಎಂಬಲ್ಲಿನ ಸಿಪಿಐಎಂ ಸ್ಥಳೀಯ ನಾಯಕ ಎಂ.ಕೆ.ಪ್ರೇಮರಾಜನ್ ಎಂಬವರ ಮನೆಗೆ ಗುರುವಾರ ಮುಂಜಾನೆ ಬಾಂಬ್ ದಾಳಿ ನಡೆಸಲಾಗಿದ್ದು, ಅವರ ಪುತ್ರಿ ಗಭರ್ಿಣಿ ಅಧಿರಾ(25) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಅಜಿತಾ ಹಾಗೂ ಇನ್ನಿಬ್ಬರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಮೂರು ಬೈಕ್ಗಳಲ್ಲಿ ಬಂದಿದ್ದ ಆರು ಮಂದಿ ಮನೆಯ ಕಿಟಕಿಯೊಳಗಡೆ ಬಾಂಬ್ ಎಸೆದು ಪರಾರಿಯಾಗಿದ್ದಾರೆ.
ಮನೆಯ ಸೀಲಿಂಗ್ ಕೆಳಕ್ಕುರುಳಿದ್ದು, ಕಿಟಕಿ, ಬಾಗಿಲು, ಪೀಠೋಪಕರಣಗಳಿಗೆ ಹಾನಿ ಸಂಭವಿಸಿದೆ. ಈ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಬವೊಡೆ ಎಂಬಲ್ಲಿನ ಬಿಜೆಪಿ ಸ್ಥಳೀಯ ನಾಯಕ ಕೆ.ಜಯರಾಜನ್ ಎಂಬವರ ಮನೆಯ ಮೇಲೂ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ಮನೆ ಭಾಗಶ: ಹಾನಿಗೊಳಗಾಗಿದೆ. ಈ ಘಟನೆಯ ಬಳಿಕ ಕಣ್ಣೂರು ಉದ್ವಿಗ್ನಗೊಂಡಿದ್ದು ವೆಳ್ಳಚ್ಚಾಲ್ ನಿವಾಸಿ ಕರುಣನ್ ಎಂಬವರ ಮನೆಯ ಮೇಲೂ ಬಾಂಬ್ ದಾಳಿ ನಡೆದ ಬಗ್ಗೆ ವರದಿಯಾಗಿದೆ.
ಪೊಲೀಸರ ಪ್ರಕಾರ, ಬೈಕ್ನಲ್ಲಿ ಸಂಚರಿಸಿದ ಒಂದೇ ತಂಡ ಕೃತ್ಯವೆಸಗಿದ್ದು, ಕಣ್ಣೂರಿನ ರಸ್ತೆಯಲ್ಲೂ ನಾಡಬಾಂಬ್ ಮತ್ತು ಪೆಟ್ರೋಲ್ ಬಾಂಬ್ ಎಸೆದು ಗಲಭೆ ಸೃಷ್ಟಿಸಲು ಯತ್ನಿಸಿದೆ. ಆದರೆ ಕಣ್ಣೂರು ಪ್ರದೇಶವನ್ನು ಪೊಲೀಸರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಎಲ್ಲೂ ಗಲಭೆ ಭುಗಿಲೇಳದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಶುಕ್ರವಾರ ಕಣ್ಣೂರಿನಲ್ಲಿ ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳು ಹರತಾಳಕ್ಕೆ ಕರೆ ನೀಡಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

