ಬಂಟ್ವಾಳ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ (ರಿ )ಬೆಂಗಳೂರು, ಇದರ ಬಂಟ್ವಾಳ ತಾಲೂಕು ಶಾಖೆಯ 2020-25 ನೇ ಸಾಲಿನ ಕಾರ್ಯಕಾರಿ ಸಮಿತಿಯ 15 ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 15 ಅಭ್ಯರ್ಥಿಗಳು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗದಲ್ಲಿ ನಾರಾಯಣ ಪೂಜಾರಿ ಎಸ್. ಕೆ, ದೇವರಾಜ್ ಎಸ್. ಕೆ, ಪುಟ್ಟರಂಗನಾಥ ಟಿ, ರವಿಕುಮಾರ್, ನವೀನ್ ಪಿ. ಎಸ್, ಯತೀಶ್.ಪಿ, ಸುನಿಲ್ ಸಿಕ್ವೆರ, ಜಯರಾಮ್, ಶಿವಪ್ರಸಾದ್, ವಸಂತ್ ರೈ. ಬಿ ಕೆ. ಮಹಿಳಾ ಮೀಸಲಾತಿ ಸ್ಥಾನದಲ್ಲಿ ಭಾರತಿ, ಪ್ರಮೀಳಾ ಡೆಪ್ನಿ ನೋಯೆಲ್ಲಾ ಡೆಸ, ಹೇಮಾವತಿ, ಮಮತಾ ಪಿ, ಶಶಿ ಬಿ ಆಯ್ಕೆಯಾದವರು. ವಿಜೇತರಿಗೆ ತಾಲೂಕು ಚುನಾವಣಾಧಿಕಾರಿ ಟಿ ಶೇಷಪ್ಪ ಮಾಸ್ಟರ್ ಪ್ರಮಾಣ ಪತ್ರ ವಿತರಿಸಿದರು. ಸಹಾಯಕ ಚುನಾವಣಾಧಿಕಾರಿ ಬಾಬು ಮಾಸ್ಟರ್ ಸಹಕರಿಸಿದರು.
