ಪೊಳಲಿ :ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ವತಿಯಿಂದ ಪಂಚಮ ವರ್ಷದ ೭೨ ಗಂಟೆಗಳ ಅಹೋರಾತ್ರಿ ಏಕಾಹಾ ಭಜನಾ ಮಹೋತ್ಸವದ ಸಮಾವೇಶಕ್ಕೆ ಮಾಣಿಲ ಶ್ರೀ ಶ್ರೀ ಮೋಹನದಾಸ್ ಸ್ವಾಮೀಜಿ, ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರುಗಳನ್ಣು ಪೂರ್ಣಕುಂಭದೊದಿಗೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಕೆ. ರಾಮ್ ಭಟ್ ಪೊಳಲಿ,ಬೆಂಜನಪದವು ರಮೇಶ್ ದೇವಿ ಪಾತ್ರಿ, ಶ್ರೀ ಕ್ಷೇ. ಧ.ಗ್ರಾ. ದ.ಕ ಜಿಲ್ಲಾ ನಿರ್ಧೇಶಕ ಸತೀಶ್ ಶೆಟ್ಟಿ, ಜಯರಾಮ್ ನೆಲ್ಲಿತ್ತಾಯ,ಯೋಜನಾಧಿಕಾರಿ, ಜಯಾನಂದ ಮಮತ ಮೇಲ್ವಿಚಾರಕಿ, ರಘುನಾಥ ಉಳ್ಳಾಲ, ವೆಂಕಟೇಶ್ ನಾವಡ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ ಅತಿಥಿಗಳನ್ನು ಶಾಲು ಹಾಕಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಸಂದರ್ಭದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಅಧ್ಯಕ್ಷ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

