ಕೈಕಂಬ: ಪೊಳಲಿ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ವತಿಯಿಂದ ಪಂಚಮ ವರ್ಷದ ೭೨ ಗಂಟೆಗಳ ಅಹೋರಾತ್ರಿ ಏಕಾಹಾ ಭಜನಾ ಮಹೋತ್ಸವಕ್ಕೆ ಡಿ.೧೨ ರಂದು ಶನಿವಾರ ಸ್ವಾಮಿ ವಿವೇಕ ಚೈತನ್ಯಾನಂದ ಕೊಡಿಮಜಲು ಅನಂತ ಪದ್ಮನಾಭ ಉಪಾದ್ಯಾಯ ದೀಪಪ್ರಜ್ವಲನೆಗೊಳಿಸಿ ಚಾಲನೆ ನೀಡಿದರು.
ಲೋಕ ಕಲ್ಯಾಣಾರ್ಥವಾಗಿ ಕೊರೊನಾ ಮಹಾಮಾರಿಯ ನಿಗ್ರಹಕ್ಕೋಸ್ಕರ ೧೦೮ ದಿನಗಳ ಕಾಲ ಮನೆ ಮನೆಗಳಲ್ಲಿ ಭಜನಾ ಸೇವೆ ನಡೆಸಿ ನಂತರ ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ೧೦೮ ದಿನಗಳಬಜನಾ ಸಂಕೀರ್ತನೆ ನಡೆದ ಬಳಿಕ ಅಹೋ ರಾತ್ರಿ ಭಜನಾ ಸಂಕೀರ್ತನೆಯು ೭೨ ಗಂಟೆಗಳು ನಡೆಯಲಿದ್ದು ಡಿ.೧೨ರಂದು ಬೆಳಗ್ಗೆ ೮ ಗಂಟಯಿಂದ ಪ್ರಾರಂಭಗೊಂಡು ಡಿ.೧೫ ರಂದು ಬೆಳಗ್ಗೆ ೮ ಗಂಟೆಯವರೆಗೆ ನಡೆದು ಮಂಗಳೋತ್ಸವ ನಡೆಯಲಿದೆ. ಡಿ. ೧೫ ರಂದು ಸಂಜೆ ೫ ಗಂಟೆಯಿಂದ ರಾತ್ರಿ ೮.೩೦ ರವರೆಗೆ ಆನಂದ ಭಜನೆ ನಡೆಯಲಿದೆ.
ಶ್ರೀ ಅಖಿಲೇಶ್ವರ ದೇವಸ್ಥಾನದ ಅಧ್ಯಕ್ಷ ಕೆ.ರಾಮ್ ಭಟ್, ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ , ವಿಷ್ಣುಮೂರ್ತಿಭಟ್ , ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ಯಶೋಧರ, ಪ್ರೇಮ್‌ನಾಥ್ ಶೆಟ್ಟಿ ಪೊಳಲಿ, ಮುರಳಿ ಪೊಳಲಿ, ಸುಮನ್ ರಾಜ್ , ವೆಂಕಟ ಕೃಷ್ಣ ಭಟ್, ರಘುನಾಥ ಉಳ್ಳಾಲ, ರಾಜೇಶ್ವರೀ ಶೆಟ್ಟಿ ಮುಂಬೈ, ಭಾಸ್ಕರ ಸಫಲಿಗ ಹಾಗೂ ಓಂಕಾರ ಅಖಿಲೇಶ್ವರ ಭಜನಾಮಂಡಳಿಯ ಪಧಾಧಿಕಾರಿಗಳು ಉಪಸ್ಥಿತರಿದ್ದರು.




