ಕೋಲಾರ: ಜೆಒಸಿ ಕೋರ್ಸುಗಳಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಖಾಯಂ ಪೂರ್ವ ಸೇವೆ, ಹಳೆ ಪಿಂಚಣಿ ಮತ್ತಿತರ ಬೇಡಿಕೆಗಳ ಕುರಿತು ಸರ್ಕಾರದ ಹಂತದಲ್ಲಿ ಚರ್ಚಿಸಿ ಈಡೇರಿಸುವುದಾಗಿ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಭರವಸೆ ನೀಡಿದರು.ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜೆಒಸಿಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ನೌಕರರ ಸಂಘದ ಪದಾಧಿಕಾರಿಗಳು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಹಾಗೂ ನೂತನವಾಗಿ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯರನ್ನು ಸನ್ಮಾನಿಸಿ, ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಸಚಿವರು ಈ ಭರವಸೆ ನೀಡಿದರು.12kolar4

ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ವಿಧಾನಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಪುಟ್ಟಣ್ಣ, ಎಸ್.ವ್ಹಿ.ಸಂಕನೂರ, ಚಿದಾನಂದಗೌಡರಿಗೆ ಹಾಲಿ ಎಂಎಲ್‌ಸಿಗಳಾದ ಬಸವರಾಜ ಹೊರಟ್ಟಿ, ಮರಿತಿಬ್ಬೆಗೌಡ, ಅರುಣಶಹಾಪೂರ, ಕೆ.ಟಿ.ಶ್ರೀಕಂಠೇಗೌಡ ಅವರನ್ನೂ ಸನ್ಮಾನಿಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಲಾಯಿತು.ಜೆಒಸಿಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಮ್ಮ ಖಾಯಂ ಪೂರ್ವ ಸೇವೆಯನ್ನು ನಿಶ್ಚಿತ ಹಳೆ ಪಿಂಚಣಿಗೆ ಪರಿಗಣಿಸುವಂತೆ ಸಚಿವರಿಗೆ ಮನವಿ ಮಾಡಲಾಯಿತು. ಜೆಒಸಿ ನೌಕರರು ೨೦ ವರ್ಷಗಳಿಗೂ ಅಧಿಕ ಸೇವೆ ಪೂರೈಸಿದ್ದರೂ, ಖಾಯಂ ಆಗಿ ವಿವಿಧ ಇಲಾಖೆಗಳಿಗೆ ವಿಲೀನಗೊಂಡಿರುವುದರಿಂದಾಗಿ ಸಿಗುವ ಸೇವಾ ಅವಧಿ ಅತ್ಯಲ್ಪವಾಗಿದೆ, ಇದರಿಂದ ನಿವೃತ್ತರಾದ ಮೇಲೆ ನಮ್ಮ ಜೀವನ,ಬದುಕಿಗೆ ಯಾವುದೇ ಆಸರೆ ಇಲ್ಲವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳಾಗಿದ್ದಾಗ ನಮ್ಮನ್ನು ಖಾಯಂ ಮಾಡಿ ಜೀವ ನೀಡಿದ್ದಾರೆ, ಇದೀಗ ಅವರೇ ಮತ್ತೆ ಸಿಎಂ ಆಗಿದ್ದು, ನಮ್ಮ ಖಾಯಂ ಪೂರ್ವ ಸೇವೆಯನ್ನು ಪಿಂಚಣಿಗೆ ಪರಿಗಣಿಸಲು ಆದೇಶಿಸಿ ನಮ್ಮ ಭವಿಷ್ಯದ ಜೀವನದಲ್ಲಿ ಎದುರಾಗುವ ಆತಂಕ ದೂರ ಮಾಡಬೇಕು ಎಂದು ನೌಕರರ ಸಂಘದ ಅಧ್ಯಕ್ಷ ಎ.ಗಂಗಾಧರ ಮನವಿ ಮಾಡಿದರು.

ರಾಜ್ಯ ಸಂಘಕ್ಕೆಗಂಗಾಧರ್ ಪುನರಾಯ್ಕೆ

ಇದೇ ಸಂದರ್ಭದಲ್ಲಿ ರಾಜ್ಯ ಜೆಒಸಿಯಿಂದ ಖಾಯಂಗೊಂಡು ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಸಭೆ ನಡೆಸಿ ಎ.ಗಂಗಾಧರ ಅವರನ್ನು ಅವಿರೋಧವಾಗಿ ಪುನರಾಯ್ಕೆ ಮಾಡಿದರು.ಕೇಂದ್ರ ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ ಮುಂದಿನ ಕಾರ್ಯ ಚಟುವಟಿಕಗಳ ಕುರಿತಂತೆ ಮಾರ್ಗದರ್ಶನ ಮಾಡಿ ರಾಜ್ಯ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲರಿಗೂ ಗಂಗಾಧರ್ ಧನ್ಯವಾದ ಸಲ್ಲಿಸಿ, ನಮ್ಮ ಬೇಡಿಕೆಗಳ ಈಡೇರಿಕೆಗೆ ನಡೆಸುವ ಹೋರಾಟಕ್ಕೆ ಎಲ್ಲರ ಸಹಕಾರ ಕೋರಿದರು.

ಸಭೆಯಲ್ಲಿ ನೌಕರರ ಸಂಘದ ಡಿ.ಕೆ.ಪುಟ್ಟಸ್ವಾಮಿ, ಎಂ.ಜಿ.ಬ್ಯಾಕೋಡ್, ಟಿ.ನರಸಿಂಹಮೂರ್ತಿ, ಜಿ.ಎಸ್.ನರೇಗಲ್, ಬಿ.ರವಿ, ಶರಣಪ್ಪ ಗುಡ್ಡ, ಕೆ.ಆರ್.ರಾಮಚಂದ್ರ, ಕೋಲಾರದ ಶಶಿಧರ್, ಚಿನ್ನಪ್ಪ ಸೇರಿದಂತೆ ರಾಜ್ಯ,ಜಿಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *