ಇಂದಿರಾ ಶೆಟ್ಟಿ ಅವರ 2ಕೃತಿಗಳ ಬಿಡುಗಡೆ
ಮೈಸೂರುಇಂದಿರಾ ಶೆಟ್ಟಿ ಅವರು ಬರೆದ ಇರುವುದೆಲ್ಲವ ಬಿಟ್ಟು ನಾಟಕ ಸಂಕಲನ ಹಾಗೂ ಭಾವ ಚಿತ್ತಾರ ಕವನ ಸಂಕಲನ ಇದೇ ತಿಂಗಳ 16 ರಂದು ಬೆಳಗ್ಗೆ ಹನ್ನೊಂದು ಗಂಟೆಗೆ ಮೈಸೂರಿನ ಪತ್ರಿಕಾಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ,ಸಾಹಿತಿ ಡಾ. ಮಾಲತಿ ಶೆಟ್ಟಿ ಮಾಣೂರು ವಹಿಸುವರು .
ಭಾವ ಚಿತ್ತಾರ ಕವನ ಸಂಕಲನವನ್ನು ಖ್ಯಾತ ಕವಿ ಡಾ. ಜಯಪ್ಪ ಹೊನ್ನಾಳಿ ಮೈಸೂರು ಬಿಡುಗಡೆಗೊಳಿಸುವರು .ಇರುವುದೆಲ್ಲವ ಬಿಟ್ಟು ನಾಟಕ ಸಂಕಲನವನ್ನು ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರೂ ಖ್ಯಾತ ಕವಿಗಳೂ ಆದ ಡಾ ಭೇರ್ಯ ರಾಮ್ ಕುಮಾರ್ ಅವರು ಬಿಡುಗಡೆಗೊಳಿಸುವರು . ಸಾಹಿತಿ ,ಚಲನಚಿತ್ರ ನಟ ಡಾ .ಕಾಸರಗೋಡು ಅಶೋಕ್ ಕುಮಾರ್ ಮುಖ್ಯ ಅತಿಥಿಯಾಗಿರುವರು .ಈ ಸಂದರ್ಭದಲ್ಲಿ ಲೇಖಕಿ ,ಕವಯಿತ್ರಿ ಇಂದಿರಾ ಶೆಟ್ಟಿ ಮೈಸೂರು ಉಪಸ್ಥಿತರಿರುವರು .