ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪ ಪುನರ್ ನಿರ್ಮಾಣ ಗೋಳ್ಳುತ್ತಿರುವ ಮಂಗಾಜೆ ಶ್ರೀ ಕೋರ‍್ದಬ್ಬು ದೈವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುರುವಾರ ಶಿಲಾನ್ಯಾಸಗೈದರು. ಪೊಳಲಿ ವೆಂಕಟೇಶ್ ತಂತ್ರಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.10-5

10-3ಶ್ರೀ ಕೋರ‍್ದಬ್ಬು ತನ್ನಿಮಾನಿಗ ಮತ್ತು ರಾಹುಗುಳಿಗ ಪರಿವಾರ ದೈವಗಳ ಪುನರ್ ನಿರ್ಮಾಣಕ್ಕೆ ಸುಮಾರ್ ೫೦ ಲಕ್ಷ ರೂ ವೆಚ್ಚದಲ್ಲಿ ದೈವಸ್ಥಾನ ನಿರ್ಮಾಣಗೊಳ್ಳಲಿದೆ. ದೈವಸ್ಥಾನದ ನಿರ್ಮಾಣದ ಕೆಲಸ ಕಾರ್ಯವನ್ನು ಎಡಪದವು ಶ್ರೀರಾಮ ಮಂದಿರದ ಅಧ್ಯಕ್ಷ ಗುತ್ತಿಗೆದಾರ ಮುರಳಿಧರ ಶೆಟ್ಟಿ ಯವರಿಗೆ ವಹಿಸಲಾಗಿದೆ.IMG_8422

ಶಿಲಾನ್ಯಾಸಗೈದ ರಾಜ್ಯಾಧ್ಯಕ್ಷರು ಸಮಿತಿ ಸದಸ್ಯರೊಂದಿಗೆ ಜೀರ್ಣೋದ್ದಾರದ ಕುರಿತು ಸಮಾಲೋಚನೆ ನಡೆಸಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.

10-1

ಈ ಸಂಧರ್ಭದಲ್ಲಿ ಉದ್ಯಮಿಗಳಾದ ಉಮೇಶ್ ಬೆಂಜನಪದವು, ಜನಾರ್ಧನ ಶೆಟ್ಟಿ ಕನ್ಯಬೆಟ್ಟು , ಸೋಮಶೇಖರ್ ಪೂಜಾರಿ ಪೊಳಲಿ, ಲೋಕೇಶ್ ಕಲ್ಲಡ್ಕ , ಚಂದ್ರಹಾಶ ಶೆಟ್ಟಿ ನಾರಳ, ವೆಂಕಟೇಶ್ ನಾವಡ ಪೊಳಲಿ, ವಿಜಯ ಬೆಂಜನಪದವು, ರಂಗನಾಥ ಶೆಟ್ಟಿ ಅಮ್ಮುಂಜೆ,ಗುತ್ತಿನವರಾದ ಶ್ರೀಕರ ಶೆಟ್ಟಿ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಸುಕೇಶ್ ಚೌಟ, ಕೋರ‍್ದಬ್ಬು ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ದೇವುದಾಸ್ ಆಯೆರೆಮಾರ್, ಶೇಖರ ಬಂಗೇರಾ, ಚರಣ್ ಕೃಷ್ಣ ನಗರ, ರಾಮ್‌ದಾಸ್ ರೈ , ಹರೀಶ್ ಶೆಟ್ಟಿ, ಜನಾರ್ಧನ ನಲಿಕೆ ಮೂಡುಶೆಡ್ಡೆ, ದೈವ ಪಾತ್ರಿ ಉದಯ ಚೇಳಾರ್, ಲಿಂಗಪ್ಪ ಗುರಿಕಾರ,ಶಶಿಧರ ಮಂಗಾಜೆ ಹಾಗೂ ಶ್ರೀ ಕೋರ‍್ದಬ್ಬು ಜೀರ್ಣೋದ್ದಾರ ಸಮಿತಿ ಹಾಗೂ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *