ಪೊಳಲಿ:ರಾಮಕೃಷ್ಣ ತಪೋವನ ,ವಿವೇಕನಂದ ಆರ್ ಸಿ.ಸಿ , ಆರೋಗ್ಯಕೇಂದ್ರ ಬೆಂಜನಪದವು ಹಾಗೂ ರೋಟರಿ ಕ್ಲಬ್ ಮಂಗಳೂರು ಉತ್ತರ ಇದರ  ವತಿಯಿಂದ  ಪೊಳಲಿ ರಾಮಕೃಷ್ಣ ತಪೋವನದಲ್ಲಿ   ಮಹಿಳೆಯರಿಗಾಗಿ *ಪ್ರಸವಪೂರ್ವ ತಯಾರಿ ಆರೋಗ್ಯ ತಪಾಸನ ಶಿಬಿರವು ಶುಕ್ರವಾರ ನಡೆಯಿತು.

23a06239-d26f-4a81-b0a5-1b43c35a6cf4

ತಪಾಸನ ಶಿಬಿರವನ್ನು  ರಾಮಕೃಷ್ಣ ತಪೋವನದ  ಸ್ವಾಮಿ ವಿವೇಕ ಚೈತನ್ಯಾನಂದ  ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಶಿಶು ಜನನ ಪೂರ್ವದಲ್ಲಿ ಗರ್ಭಿಣಿ ಮಾತೆಯವರು, ಯೋಗ, ಧ್ಯಾನ, ಉತ್ತಮ ಸಂಸ್ಕಾರದಿಂದ ಕೂಡಿದ ಸಾಕಾರಾತ್ಮಕ ಭಾವನೆಗಳಿಂದ  ಸತ್ ಚಿಂತನೆಗಳಿಂದ ಇದ್ದಾಗ ಉತ್ತಮ ಸಂಸ್ಕಾರದಿಂದ ಕೂಡಿದ ಭಕ್ತ ಪ್ರಹ್ಲಾದ ನಂತಹ ಸಂತಾನ ಪ್ರಾಪ್ತವಾಗುತ್ತದೆ ಎಂದರು.3189596b-97b7-49a2-a7db-9153dba4981d

ಶಿಬಿರದ ವೈದ್ಯಾಧಿಕಾರಿ ಡಾ. ಆಂಸಿಲ್ಲಾ ಪತ್ರವೋ ರವರು ಗರ್ಭಿಣಿಯರ ಪ್ರಸವಪೂರ್ವ ತಯಾರಿ ಕುರಿತು ಸೂಕ್ತ ಮಾರ್ಗದರ್ಶನದ ಮಾಹಿತಿಯ ಉಪನ್ಯಾಸ ನೀಡಿ, ಆರೋಗ್ಯ ಸಿಬ್ಬಂದಿ ಗಳೊಂದಿಗೆ ಶಿಬಿರದಲ್ಲಿ ಬಾಗವಹಿಸಿದ ಗರ್ಭಿಣಿಯರನ್ನು ಆರೋಗ್ಯ ತಪಾಸಣೆ ಮಾಡಿ ಸೂಕ್ತ ಸಲಹೆಯನ್ನು ನೀಡಿ  ಔಷದಿ ಹಾಗೂ ಪೋಷಕವಿಟಮಿನ್ ಯುಕ್ತ ಮಾತ್ರೆ ಗಳನ್ನು ನೀಡಿದರು.d52eb34f-5bcf-4a34-aebe-f2059c9eb2f9

ಸಾದಕರಿಗೆ ಸನ್ಮಾನ 

ಕೋವಿಡ್ ಪರಿಸ್ಥಿಯಲ್ಲಿ ತಪೋವನ ಹಾಗೂ ಇನ್ನಿತರ ಸ್ಥಳದಲ್ಲಿ ಉಚಿತವಾಗಿ ಅಕ್ಯುಪಂಚರ್ ಆರೋಗ್ಯ ಶಿಬಿರ ನಡೆಸಿದ ರಾಜ್ ಪ್ರಸಾದ್ ಹೆಗ್ಡೆ, ಮತ್ತು ತಪೋವನದ ವೃತ್ತಿ ಕೌಶಲ್ಯದ ವಿವಿಧ ತರಬೇತಿ ಪಡೆದು ಸ್ವಯಂ ಉದ್ಯೋಗದಲ್ಲಿ ಯಶಸ್ವೀಯಾದ ಸಾದಕ ಮಹಿಳೆ  ಆಶಾ ರವರನ್ನು ರೋಟರಿ ಕ್ಲಬ್ ಉತ್ತರದ ಪರವಾಗಿ ತಪೋವನದ ವಿವೇಕ ಚೈತನ್ಯ ಸ್ವಾಮೀಜಿ ಯವರು ಹಾಗೂ ಕ್ಲಬ್ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಸನ್ಮಾನಿಸಿದರು .e0cf8bd3-d0c4-4357-a9f8-3a37652d8812 (1)

ಕಾರ್ಯಕ್ರಮದಲ್ಲಿ  ರೋಟರಿ  ಡಾ ಸುದರ್ಶನ್,  ದೇವದಾಸ್ ರಾವ್,  ನಯನ್ ಕುಮಾರ್,  ಚೇರ್ಮೆನ್ ಜೆ. ವಿ. ಶೆಟ್ಟಿ, ಯೂತ್ ಡೈರೆಕ್ಟರ್ ವಾಲ್ಟೇರ್ ಡಿಕುನ್ನಾ, ಕಾರ್ಯದರ್ಶಿ ವಿಠ್ಠಲ ಕುಡ್ವ, ರೋಟರಿ ಗಣೇಶ್ ಕೃಷ್ಣ ಭಟ್, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.83cbecf4-313d-43c2-969b-9b641979507b

 ಈ ಶಿಬಿರದಲ್ಲಿ ಡಾ. ಸುದರ್ಶನ್ ಮುಂಡ್ಕುರ್, ಪ್ರೆಸಿಡೆಂಟ್ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ವಿಠ್ಠಲ ಕುಡ್ವ, ನಯನ ಕುಮಾರ್,ದೇವದಾಸ್ ರಾವ್, ಯೂತ್ ಸರ್ವಿಸ್ ಡೈರೆಕ್ಷರ್ ವಾಲ್ಟೇರ್ ಡಿಕುನ್ನಾ ಚೇರ್ಮೆನ್  ಜೆ. ವಿ. ಶೆಟ್ಟಿ, ರೋ. ಗಣೇಶ್ ಕೃಷ್ಣ ಭಟ್, ಆಶ್ರಮದ ಕಿರಣ್ ಬ್ರಹ್ಮಾಚಾರಿ, ಪೂರ್ಣಿಮ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *